ಮನದ ಮಾತು

Friday, June 30, 2006

 

ವಿಜಯ ಕರ್ನಾಟಕ - ಟೈಮ್ಸ್ ಆಫ್ ಇಂಡಿಯ ಬೇಜವಾಬ್ದಾರಿ



ಇದು ನ್ಯಾಯವೇ!?? ಕನ್ನಡಿಗರ ಬಗ್ಗೆ ಇಷ್ಟೋಂದು ನಿರ್ಲಕ್ಷ್ಯ, ಅಸಡ್ಡೆ, ಬೇಜವಾಬ್ದಾರಿ ಯಾಕೆ? ಕನ್ನಡಿಗರ ದೌರ್ಭಾಗ್ಯಕ್ಕೆ ಕೊನೆಯೇ ಇಲ್ಲವೆ?




ಸಮಸ್ತ ಕನ್ನಡಿಗರ ಹೆಮ್ಮೆಯೆಂದೇ ಹೆಸರಾಗಿದ್ದ 'ವಿಜಯ ಕರ್ನಾಟಕ' ದಿನಪತ್ರಿಕೆಯು 'ಟೈಮ್ಸ್ ಆಫ್ ಇಂಡಿಯ' ತೆಕ್ಕೆಗೆ ಬಿದ್ದ ಹೊಸ್ತಿಲಲ್ಲೇ ಈ 'ಅಚಾತುರ್ಯ'ವೇ?
ಬರೆಯುವುದಿನ್ನೇನೂ ಉಳಿದಿಲ್ಲ. "ಇದು ನ್ಯಾಯವೇ!??" ಎಂಬ ನಮ್ಮ ಪ್ರಶ್ನೆಗೆ ಉತ್ತರಿಸುವವರಾರು?

~ ಮನ


Comments:
ಹಾಡುಹಗಲೇ ಕನ್ನಡದ ಕೊಲೆ. ಕನ್ನಡದ ಕಣ್ಮಣಿ ಅಂತ ನಮ್ಮ ಕಣ್ಣಿನೊಳಗೇ ಇಟ್ಟುಕೊಂಡು ಸಾಕಿ ಸಲಹಿದ್ದಕ್ಕೆ ಸರಿಯಾದ ಉತ್ತರ. ಅದೇನೋ ಹೇಳ್ತಾರಲ್ಲ 'ಗಿಣಿ ಸಾಕಿದ ಹಾಗೆ ಸಾಕಿ ಗಿಡುಗನ ಬಾಯಿಗೆ ಕೊಟ್ರು' ಅಂತ ಹಾಗಾಯ್ತು. ಟೈಮ್ಸ್‍ನವರು ಕನ್ನಡಿಗರ ಅನ್ನ ತಿಂದು ಬೆಳೆದು ಕನ್ನಡಿಗರನ್ನೇ ಅವಹೇಳನ ಮಾಡ್ತಿದ್ರೂ ಯಾರೂ ಯಾಕೆ ಸೊಲ್ಲೆತ್ತುತ್ತಿಲ್ಲ. ಕನ್ನಡದ ಮೇಲ್ಬರಹ ಇಟ್ಟುಕೊಂಡು ಬೇಕಾಗಿಯೇ ತಮಿಳಿನಲ್ಲಿ ಪತ್ರಿಕೆ ಹೊರಡಿಸುತ್ತಿದ್ದಾರೆ.

ಮನ ಅವರೇ ಇಲ್ಲಿ ಬೇಜವಾಬ್ದಾರಿ ಟೈಮ್ಸ್‍ನವರದ್ದಲ್ಲ. ವಿಜಯ ಕರ್ನಾಟಕವನ್ನು ಮಾರುವಂತಹ ಪರಿಸ್ಥಿತಿ ಏನಿತ್ತು?

ನೋಡೋಣ ಇನ್ನೇನಾನಾಗತ್ತೋ ಅಂತ.
 
ಕಾರಣಗಳೇನೇ ಇದ್ದರೂ ಇದೊಂದು ದುರದೃಷ್ಟಕರ ಬೆಳವಣಿಗೆ. ಇದೇ ಅಚಾತುರ್ಯ ಇತರ ಭಾಷಾ ಪತ್ರಿಕೆಗಳಿಗೆ ಆಗಿದ್ದರೆ ಅವರು ಖಂಡಿತ ಸುಮ್ಮನಿರುತ್ತಿರಲಿಲ್ಲ. ಕೊನೆ ಪಕ್ಷ, ಬೆಂಗಳೂರಿನಲ್ಲಿರುವ ಕನ್ನಡಿಗರು ಪತ್ರಿಕೆ ಕಚೇರಿಗೆ ದೂರವಾಣಿಯನ್ನಾದರೂ ಮಾಡಿ, ಆಗಿರುವ ತಪ್ಪು ಸರಿಪಡಿಸಲು ಪ್ರಯತ್ನಿಸಲಿ.
 
ಮೊದ್ಲೆಲ್ಲಾ ಏನಿರೋದು ಅದರ ಜಾಗದಲ್ಲಿ? ನಾನು ಇವತ್ತು ನೋಡ್ದಾಗ ವಿಜಯಕರ್ನಾಟಕವೇ ಕಾಣಿಸ್ತು.
ಕ್ಷಮಿಸಿ, ನಾನು ಇನ್ನೂ ಈ ಪೇಪರನ್ನು ಓದೋಕೆ ಶುರು ಮಾಡಿಲ್ಲ.

ನೀವು ಈ ಬರಹ ಬರ್ದು ಒಳ್ಳೇ ಕೆಲ್ಸಾ ಮಾಡಿದ್ರೆ, ನಿಮ್ಮ ಧ್ವನಿ ಕೇಳಿ ಅವರೂ ಹೆದರಿರಬಹುದು!
 
ಅಂತರಂಗಿಗಳೇ, ತಮಾಷೆ ಮಾಡ್ತೀರಾ? "ಕೈಲಾಗದವನು ಮೈ ಪರಚಿಕೊಂಡ" ಅನ್ನೋ ಹಾಗೆ ನಾವೆಲ್ಲ ಇಲ್ಲಿ ಕೂಗಾಡಿದರೆ ಯಾರು ಹೆದರುತ್ತಾರೆ? ಈಗಿರುವ ನಮ್ಮ ಪತ್ರಿಕೆ,ಟೀವಿ ಚಾನೆಲ್‍ಗಳೆಲ್ಲ ಪರಭಾಷೆಯವರದ್ದು. ಒಂದು ದಿನ ಅವರು "ನಾವು ಇನ್ನು ಮೇಲೆ ನಾವು ಕನ್ನಡ ಹಾಕಲ್ಲ, ಬೇಕಾದರೆ ನೋಡಿ, ಇಲ್ಲದಿದ್ದರೆ ಬಿಡಿ" ಎಂದರೆ ನಮ್ಮಲ್ಲಿ ಏನು ಉತ್ತರವಿದೆ??
 
sritri ಅವರೇ,

ನಮ್ಮ ಧ್ವನಿಗೆ ಅಲ್ಲಲ್ಲಿ ಮಾನ್ಯತೆ ಇನ್ನೂ ಸಿಗುತ್ತೆ, ಆದ್ದರಿಂದಲೇ ನಾನು ಆ ಮಾತನ್ನು ಬರೆದಿದ್ದು.
ಉದಾಹರಣೆಗೆ, "ಸಂಜಯ" ಅವರಿಂದ 'ನೂರೆಂಟು ಮಾತಿ'ಗೆ ಬಹಳಷ್ಟು 'ಅರ್ಥ' ಬಂದಿದೆ.
ನಾನು ಇಲ್ಲಿನ ಸ್ಥಳೀಯ ರಾಕ್ ಸ್ಟೇಷನ್ ಒಂದಕ್ಕೆ ಭಾರತೀಯರನ್ನು ಕುರಿತು ಬಹಳಷ್ಟು ತಮಾಷೆ ಮಾಡುತ್ತಾರೆಂದು (ನಮ್ಮ ಆಕ್ಸೆಂಟನ್ನು ಕುರಿತು, ನಮ್ಮ ಟೆಕ್ನೀಷಿಯನ್‌ಗಳು ಮಾತನಾಡುವುದನ್ನು ಉದಾಹರಿಸಿ) ಒಂದು ಫೋನ್ ಕಾಲ್ ಮಾಡಿ ಹೇಳಿದ್ದೆ, ಹಾಗೂ ಒಂದು ಇ-ಮೇಲನ್ನೂ ಬರೆದಿದ್ದೆ - ಅವತ್ತಿನಿಂದ ಅಂತಹದ್ದೇನೂ ಕೇಳಿ ಬಂದಿಲ್ಲ.

ಯಾವ ವ್ಯವಸ್ಥಾಪಕರು ದಿನವೊಂದಕ್ಕೆ ಸಾವಿರಾರು ಇ-ಮೇಲ್‌ಗಳನ್ನು ಎದುರಿಸಿ ನಿಲ್ಲಬಲ್ಲರು? ಒಂದು ವೇಳೆ 'ಇನ್ನು ಮೇಲೆ ಕನ್ನಡ ಹಾಕಲ್ಲ, ಏನ್ ಮಾಡ್ತೀರೋ ಮಾಡಿ' ಎಂದೇ ಬಿಟ್ಟರು ಅಂದುಕೊಳ್ಳಿ ಅದನ್ನು ವ್ಯವಸ್ಥಿತವಾಗಿ ಪ್ರತಿಭಟಿಸಬಹುದು, 'ಮನ' ಅವರ ಬರಹ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಷ್ಟೇ.
 
ತವಿಶ್ರೀ: 'ಗಿಣಿ ಸಾಕಿದ ಹಾಗೆ ಸಾಕಿ ಗಿಡುಗನ ಬಾಯಿಗೆ ಕೊಟ್ರು' ಎನ್ನುವ ಮಾತು ಅಕ್ಷರಶಃ ನಿಜ. ಕನ್ನಡಿಗರು ಇಷ್ಟು ದಿನ ಆತ್ಮೀಯತೆಯಿಂದ ಪೋಷಿಸಿರುವ ಗಿಣಿಯು ಈಗ ಗಿಡುಗನ ಕೈಲಿ ಸಿಕ್ಕು ನಲುಗುತ್ತಿರುವುದು ವಿಷಾದದ ಸಂಗತಿ.

ತ್ರಿ: "ಕೈಲಾಗದವರು...." ಎಂದು ನಮ್ಮನ್ನು ನಾವೇ ಏಕೆ ಕೀಳರಿಮೆಯಿಂದ ಕಾಣಬೇಕು? ಲಾಭವಿಲ್ಲದೇ ಯಾರೂ ಉದ್ದಿಮೆಯನ್ನು ಕೈಗೊಳ್ಳುವುದಿಲ್ಲ, ಮುಂದುವರೆಸುವುದಿಲ್ಲ. ಒಂದೇ ದಿನಪತ್ರಿಕೆಯ ಮೇಲೆ ಅವಲಂಬಿತವಾಗಿಲ್ಲ ಜನರು. ಕನ್ನಡ / ಕನ್ನಡಿಗರ ಮೇಲೆ ಅನ್ಯಾಯವಾದಾಗ ಅದನ್ನು ಎದುರಿಸಿ ಧ್ವನಿಯೆತ್ತುವುದು ನಮ್ಮ ಕರ್ತವ್ಯ.

ಅಂತರಂಗಿ: ಮೊದಲೆಲ್ಲಾ ಅಲ್ಲಿ ಏನಿರುತ್ತಿತ್ತು ಎಂದರೆ, ಕನ್ನಡವೇ ಇರುತ್ತಿತ್ತು. ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರತಿಅಚ್ಚು ಅಂತರ್ಜಾಲದಲ್ಲಿ ಲಭ್ಯವಿರುತ್ತಿತ್ತು, ಆ ತಾಣದಲ್ಲಿ.
ಆ ಪತ್ರಿಕೆಯ ಪುಟಗಳನ್ನು ತಿರುವಿಹಾಕಿ, ಸುದ್ದಿಯನ್ನೋದುವುದು ನನ್ನ ದಿನನಿತ್ಯದ ಕೆಲಸಗಳಲ್ಲೊಂದು. :)
 
ಬ್ಲಾಗಿಸಿದ 'ಮನ' ಮತ್ತು ಕಮೆಂಟಿಸಿದ ಇತರರ ಗಮನಕ್ಕೆ:

ಇದು ವಿಜಯಕರ್ನಾಟಕದ್ದಾಗಲೀ ಟೈಮ್ಸ್ ಆಫ್ ಇಂಡಿಯಾದ್ದಾಗಲೀ ಬೇಜವಾಬ್ದಾರಿಯ ಕೆಲಸವಲ್ಲ. ಈ ePaper ಗಳನ್ನು ಪತ್ರಿಕೆಗಳಿಗೆ ನಿರ್ಮಿಸಿಕೊಡುವ ಸಂಸ್ಥೆ Ninestars Information Technologies Ltd. ಅದು ISO9001 Certified ಕಂಪೆನಿ. ಆ ಕಂಪೆನಿಯು ವಿಜಯಕರ್ನಾಟಕ, ಪ್ರಜಾವಾಣಿ, ಮಲಯಾಳಮನೋರಮಾ, ಮಾತೃಭೂಮಿ, 'ಹಿಂದೂ' ಬಳಗದ ಎಲ್ಲ ಪತ್ರಿಕೆಗಳು ಮತ್ತು ಈ ವೀರಕೇಸರಿ ಪತ್ರಿಕೆಯ ePaperಗಳನ್ನು ಮಧ್ಯರಾತ್ರಿಯವೇಳೆ (ಪತ್ರಿಕೆಗಳು ಸಜ್ಜಾಗುತ್ತಿದ್ದಂತೆಯೇ) ತಯಾರಿಸುತ್ತದೆ.

ಮೊನ್ನೆಯ ದಿನ (ಕನ್ನಡ ವಿಜಯಕರ್ನಾಟಕವು ತಾತ್ಕಾಲಿಕವಾಗಿ ತಮಿಳು ವೀರಕೇಸರಿಯಾದ ದಿನ)Ninestars Information Technologies Ltd.ನಲ್ಲಿ ರಾತ್ರಿಪಾಳಿಯಲ್ಲಿದ್ದವ ಸ್ವಲ್ಪ ನಶೆ ಏರಿಸಿ ಕೆಲ್ಸಮಾಡುತ್ತಿದ್ದ ಇರಬಹುದು. ISO9001 Certificate ಇರುವ ಆ ಕಂಪೆನಿ 99.995% ಸರಿಯಾಗಿಯೇ ಕೆಲಸಮಾಡಬೇಕಾದರೂ ಉಳಿದ 0.005%ದಲ್ಲಿ ಈ ಅಚಾತುರ್ಯ ಘಟಿಸಿತು.

ವಿಜಯಕರ್ನಾಟಕ ಪ್ರಧಾನಸಂಪಾದಕ ವಿಶ್ವೇಶ್ವರಭಟ್ಟರ ಗಮನಕ್ಕೆ ಇದನ್ನು ಕೂಡಲೆ (ಅಂದರೆ ತಮಿಳು ePaperನ ಮುಖಪುಟ ಕಾಣಿಸಿಕೊಂಡ ಐದಾರು ನಿಮಿಷಗಳಲ್ಲೇ) ತರಲಾಗಿತ್ತು.

ಅಂದಹಾಗೆ, Ninestars Information Technologies Ltd. ನಮ್ಮ IBMನ "Newspaper Content Management solution"ಗೆ OEM (Original Equipement Manufacturer)!!
 
ಉಪಯುಕ್ತ ಮಾಹಿತಿಗೆ ಬಹಳ ಧನ್ಯವಾದಗಳು ಪನ್'ಟರೇ! :)
ಇದು ವಿಜಯಕರ್ನಾಟಕದ ಅಥವಾ ಟೈಮ್ಸ್ ಆಫ್ ಇಂಡಿಯದವರ ಬೇಜವಾಬ್ದಾರಿಯಲ್ಲ ಎಂದು ತಿಳಿದು ಕೊಂಚ ಸಮಾಧಾನವಾಯಿತು. ಆದರೆ ಒಂದಂತೂ ನಿಜ. ಈ ಅಚಾತುರ್ಯವನ್ನು 'ಅಚಾತುರ್ಯ' ಎಂದು ಕರೆಯುವುದು ಸೌಜನ್ಯತೆಯ ಪರಮಾವಧಿ!

----

ಅಂದಹಾಗೆ, Ninestars Information Technologies Ltd. ನಮ್ಮ IBMನ "Newspaper Content Management solution"ಗೆ OEM (Original Equipement Manufacturer)!!

:O :O :O :O
 
Post a Comment



<< Home
This page is powered by Blogger. Isn't yours?