ಮನದ ಮಾತು

Wednesday, July 05, 2006

 

F11 ಚಮಕ್ ಚಮಕ್ ಚಮಕ್ ಚಮಕ್

ಮುನ್ನುಡಿ:
Object Oriented Programingನಲ್ಲಿ ಒಂದು ಮುಖ್ಯವಾದ ಆಯಾಮ...."ಓವರ್‍ಲೋಡಿಂಗ್". ಅಂದರೇ ಓಂದೇ ಸೌಲಭ್ಯವನ್ನು ಸಮಯ,ಸಂದರ್ಭಕ್ಕೆ ತಕ್ಕಂತೆ, ವಿಧವಿಧವಾಗಿ ಉಪಯೋಗಿಸುವುದು. ಇಂಥಹದ್ದೊಂದು ಸೌಲಭ್ಯ ಇತ್ತೀಚೆಗೆ 'ಮನ'ಸೆಳೆಯಿತು. ಇದು ಹಲವರಿಗೆ ಈಗಾಗಲೇ ಗೊತ್ತಿರಬಹುದಾದರೂ, ಗೊತ್ತಿಲ್ಲದವರು ಪೇಚಾಡಿದ್ದಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ್ದೇನೆ :). ಮಿಕ್ಕಿದ್ದು, ಮುಗಿಸುವ ಮುನ್ನ.


ನಾವೆಲ್ಲರೂ ದಿನನಿತ್ಯ ಬಳಸುವ ಒಂದು ವಸ್ತು ಅಂದರೆ ಕಂಪ್ಯೂಟರಿನ ಕೀಬೋರ್ಡು. ಈ ಕೀಬೋರ್ಡಿನ ಕೀಲಿಗಳಲ್ಲಿ ವಿಧವಿಧವಾದ ಶಾರ್ಟ್‍ಕಟ್‍ಗಳು, efficient navigation ತಂತ್ರಗಳು ಅಡಗಿವೆ. ನೆನ್ನೆಯಷ್ಟೆ ನನ್ನ ಸ್ನೇಹಿತರೊಬ್ಬರಿಂದ ಕಲಿತ ವಿಷಯ: Windows Key ಮತ್ತು Pause/Break Key ಎರಡನ್ನೂ ಒಟ್ಟಿಗೆ ಒತ್ತಿದರೆ 'System Properties' ಕಿಟಕಿ ಬರುತ್ತದೆ. System Properties window ಹೆಚ್ಚಾಗಿ ಉಪಯೋಗಿಸುವವರಿಗೆ ಈ ಶಾರ್ಟ್‍ಕಟ್ ಬಲು ಪ್ರಯೋಜನಕಾರಿ.
ನಿಲ್ಲಿ! ಇಲ್ಲಿ ನಾ ಹೇಳಲು ಹೊರಟಿರುವುದು F11 ಕೀಲಿಯ ಚಮತ್ಕಾರದ ಬಗ್ಗೆ.

ನನ್ನ ಗಮನಕ್ಕೆ ಬಂದಿರುವಂತೆ F11 ಕೀಲಿಯು ನಾಲ್ಕು ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿ ಕೆಲಸ ಮಾಡುವುದು.

೧. ಬರಹ ಡೈರೆಕ್ಟ್(ಅಥವಾ 'ಬರಹ ಐಎಂಇ') ಚಾಲನೆಯಲ್ಲಿದ್ದರೆ, F11 ಕೀಲಿಯ ಪ್ರಯೋಗ ಆಂಗ್ಲ ಮತ್ತು ಆಂಗ್ಲೇತರ (ಸಾಮಾನ್ಯವಾಗಿ ಕನ್ನಡ) ಭಾಷೆಗಳ ನಡುವೆ ಸ್ವಿಚ್ ಆಗುವಂತೆ ಮಾಡುವುದು.
ಬರಹ ಡೈರೆಕ್ಟ್ ಉಪಯೋಗಿಸಿ ಕನ್ನಡದಲ್ಲಿ ಟೈಪ್ ಮಾಡುವವರಿಗೆ ಇದು ಹೊಸತೇನಲ್ಲ.

ಈಗ ಬರಹ ಡೈರೆಕ್ಟ್ ಕ್ಲೋಸ್ ಮಾಡಿ ಆಯಿತು. ಅಂದರೆ, ಚಾಲನೆಯಲ್ಲಿಲ್ಲದಂತೆ ಮಾಡಿದೆವು ಎಂದಿಟ್ಟುಕೊಳ್ಳೋಣ.
೨. Internet Explorer browser window ಅಥವಾ Firefox browser window ಅಥವಾ Windows Explorer window (Folders explorer), ಇವು ಯಾವುದಾದರೊಂದು ಕಿಟಕಿ ಮೇಲೆ F11 ಕೀ ಒತ್ತಿ.
Full Screen ಕೆಲಸವನ್ನು ಮಾಡುವುದು ಈ F11 ಕೀ. ಮತ್ತೆ ಇನ್ನೊಮ್ಮೆ F11 ಒತ್ತಿದರೆ, ಕಿಟಕಿಗಳು ಮತ್ತೆ ಹಿಂದಿನಂತೆ ಮಾಮೂಲಿ ಸ್ಥಾನಕ್ಕೆ ಬರುವವು.

೩. ಈಗ ಸ್ವಲ್ಪ ಸಂಗೀತ ಕೇಳೋಣವೇ? ಸರಿ Real Player ಶುರುಹಚ್ಚಿದೆವು. ಸಂಗೀತ ಕೇಳಲು ಪ್ರಾರಂಭಿಸಿದೆವು. ಯಾರದೋ ಫೋನ್ ಬಂತು. ಈಗ ಮ್ಯೂಟ್ ಮಾಡಬೇಕು. ಹೇಗೆ? ಹಾಂಹಾಂ...ಮೌಸ್ ಮೊರೆಹೋಗುವ ಅವಶ್ಯಕತೆಯಿಲ್ಲ. F11 ಒತ್ತಿ ಅಷ್ಟೆ! ನಿಮ್ಮ ರಿಯಲ್ ಪ್ಲೇಯರಲ್ಲಿನ ಶಬ್ಧ ನಿಶಬ್ಧವಾಗುತ್ತದೆ. ಶಬ್ಧವು ಮರುಕಳಿಸಲು ಮತ್ತೊಮ್ಮೆ F11 ಒತ್ತಿ. :)

ಸರಿ, ಇವೆಲ್ಲಾ ಆಯಿತು. ಬೇರಾರಿಗೂ ತೊಂದರೆಯಾಗದಂತೆ F11 ಕೀಯನ್ನು ಉಪಯೋಗಿಸಿದೆವು. ಆದರೆ, ಈ ಕೀಲಿಯ ಚಮಕ್ ಇರುವುದೇ(ನನ್ನ ಅಭಿಪ್ರಾಯದಲ್ಲಿ), ಗೂಗಲ್ ಟಾಕ್ ಮೆಸ್ಸೆಂಜರಿನಲ್ಲಿ. ಸ್ನೇಹಿತರ ಜೊತೆ ಚಾಟ್ ಮಾಡುವಾಗ, ಇದ್ದಕ್ಕಿದ್ದ ಹಾಗೆ ಕರೆ ಬರುವುದೂ, ಇದ್ದಕ್ಕಿದ್ದ ಹಾಗೆ ಕರೆ ಹೋಗುವುದು ನಡೆಯಿತು. ಇದೇನಿದು ಆಶ್ಚರ್ಯ ಎಂದುಕೊಂಡಿದ್ದಾಯಿತು. ನಂತರ ತಿಳಿಯಿತು, ಇದು F11 ಮಹಾಶಯನ ಕೆಲಸ ಎಂದು!
ಅಂದರೆ....
೪. ಗೂಗಲ್ ಟಾಕ್ ನಲ್ಲಿ, ಕನ್ನಡ ಟೈಪ್ ಮಾಡಲು F11 ಉಪಯೋಗಿಸಿದಾಗ, ಬರಹ ಡೈರೆಕ್ಟ್ ಚಾಲನೆಯಲ್ಲಿದ್ದರೆ, ಕನ್ನಡ-ಆಂಗ್ಲ ಬದಲಾವಣೆ ಕೆಲಸ ಆಗುತ್ತದೆ. ಬರಹ ಡೈರೆಕ್ಟ್ ಚಾಲನೆಯಲ್ಲಿಲ್ಲದಿದ್ದರೆ, ಗೂಗಲ್ ಟಾಕಿನ ಯಾವ ಕಿಟಕಿಯ ಮೇಲೆ focus ಇರುತ್ತದೆಯೋ ಆ ಕಿಟಕಿಯಿಂದ ಕರೆಯು ಹೋಗುವುದು, ನಿಮ್ಮ ಸ್ನೇಹಿತರಿಗೆ!! ತಿಳಿಯಿತಲ್ಲಾ. ಮುಂದಿನ ಬಾರಿ ಅಕಸ್ಮಾತ್ ನಿಮ್ಮಿಂದ ಅನಿರೀಕ್ಷಿತ ಕರೆ(ಗೂಗಲ್ ಟಾಕ್‍ನಲ್ಲಿ) ಹೋದರೆ ಅಥವಾ ಬಂದರೆ, ಅದಕ್ಕೆ ಕಾರಣ "ಬರಹ ಡೈರೆಕ್ಟ್ ಆನ್ ಆಗಿದೆ" ಎಂದುಕೊಂಡು F11 ಕೀಲಿಯನ್ನು ಒತ್ತಿರುವುದು. :)

ಮುಗಿಸುವ ಮುನ್ನ:
F11 ಕೀಲಿಯ ವಿವಿಧ ಉಪಯೋಗಗಳನ್ನು ಪ್ರಯೋಗ ಮಾಡಿ ನೋಡಿ. ಇಲ್ಲಿ ಬರೆದಿರುವ ನಾಲ್ಕೂ ಉಪಯೋಗಗಳ ಜೊತೆಗೆ, ಬೇರೆ ಬೇರೆ ಅಪ್ಲಿಕೇಷನ್‍ಗಳಲ್ಲಿ ಬೇರೆ ರೀತಿಯ ಉಪಯೋಗ ಖಂಡಿತಾ ಇರಬಹುದು. ಆ ರೀತಿಯ ಉಪಯೋಗಗಳಲ್ಲಿ, ಕುತೂಹಲಕಾರಿಯಾದ ಅಥವ ಗಮನಾರ್ಹವಾದದ್ದೇನಾದರೂ ನಿಮ್ಮ ಅನುಭವಕ್ಕೆ ಬಂದಿದ್ದರೆ, ಅಥವ ಮುಂದೆ ಬಂದಲ್ಲಿ ದಯವಿಟ್ಟು ನನಗೂ ತಿಳಿಸಿ. :)

~ ಮನ


Comments:
ಬಹಳ ಉಪಯುಕ್ತ ಮಾಹಿತಿಯನ್ನು ನೀಡಿರುವಿರಿ. f11 ಕೀಲಿಯ ಉಪಯೋಗದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಬರಹ ಉಪಯೋಗಿಸುವುದಕ್ಕೆ ಮಾತ್ರ ಇದು ಇರುವುದು ಎಂದು ತಿಳಿದಿದ್ದೆ. ಇನ್ನು ಮೇಲೆ ನನ್ನ ಜಂಜಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು. ವಂದನೆಗಳು.
 
f11 ಉಪಯೋಗಿಸ್ತಾ ನಾನೂ ಬಹಳ ವಿಷಯ ಕಲಿತಿದ್ದೇನೆ. ನಮ್ಮ key boardನಲ್ಲಿ ಯಾವುದೋ ಒಂದು ಗುಂಡಿ ಆಫ್ ಆಗಿದ್ದರೆ, ಬರಹ ಕನ್ನಡ ಬರುವ ಬದಲು "ಹುಡುಕು" ಬಾಕ್ಸ್ ಬರುತ್ತದೆ. ಬರಹ ಡೈರಕ್ಟ್ ಆನೇ ಮಾಡದೆ f11 ಒತ್ತಿದರೆ, ಟೂಲ್ ಬಾರ್ ಏನೇನೋ ಆಗತ್ತೆ. ವಿಕಿಯಿಂದ f1 ಇದರ ಉಪಯೋಗ ಹೆಚ್ಚಾಗಿದೆ. f11 ಒತ್ತದೆ ಹಾಗೇ ಯಾಹೂನಲ್ಲಿ ಮೆಸೇಜ್ ಕಳಿಸಿದರೆ ಆ ಕಡೆಯವರು ತಬ್ಬಿಬ್ಬು :)
 
ಮನವೇ,

ನನಗು ಈ ಅನುಭವವಾಗಿದೆ. F11, ಬರಹ ಚಾಲನಯಿಲ್ಲದ್ದಿದ್ದಾಗ, ಒತ್ತಿದರೆ, ಸೀದ ಕರೆ ಮಾಡುತ್ತೆ :)
ಒಂದೆರಡುಬಾರಿ ಯಾಮಾರಿ, ನಂತರ ಬುದ್ದಿಗೆ ಹೊಳಿತು :).

ಭೂತ
 
F11 ಕೀಲಿ ಅಷ್ಟೆಲ್ಲ ಚಮಕ್ ಚಮಕ್ ಮಾಡುತ್ತದಾದರೆ F13 ಕೀಲಿ ತನ್ನ ಪಾಡಿಗೆ ಅಂತರ್ಧಾನವಾಗಿ ನಿದ್ದೆ ಮಾಡುತ್ತ ಇರುತ್ತದೆ! ಬೇಕಿದ್ದರೆ ನಿಮ್ಮ ಕೀಬೋರ್ಡ್ ಮೇಲೆ ದೃಷ್ಟಿ ಹಾಯಿಸಿ!!
 
Post a Comment



<< Home
This page is powered by Blogger. Isn't yours?