ಮನದ ಮಾತು

Thursday, July 13, 2006

 

ಅಂತರ್ಜಾಲದಲ್ಲಿ ಕನ್ನಡ ದಿನಪತ್ರಿಕೆಗಳು


ಮುನ್ನುಡಿ:
'ಅಂತರ್ಜಾಲದಲ್ಲಿ ಕನ್ನಡ' ಕಳೆದ ಕೆಲವು ತಿಂಗಳುಗಳಿಂದ ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವುದು ಸಂತಸದ ಸಂಗತಿ. ಕನ್ನಡದ ಅಂತರ್ಜಾಲದ ತಾಣಗಳು, ಚರ್ಚಾವೇದಿಕೆಗಳು, ಕನ್ನಡದಲ್ಲಿಯೇ ಈಮೈಲ್, ಯಾಹೂ/ಗೂಗಲ್ ಮೆಸೆಂಜರ್‍ಗಳಲ್ಲಿ ಕನ್ನಡದಲ್ಲಿಯೇ ಮಾತುಕತೆ, ಮತ್ತು ಇವೆಲ್ಲದಕ್ಕೂ ಮಿಗಿಲಾಗಿ ದಿನೇ ದಿನೇ ಹೆಚ್ಚುತ್ತಿರುವ ಕನ್ನಡ ಬ್ಲಾಗ್‍ಗಳು, ಇತ್ಯಾದಿ ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆ ಕನ್ನಡ/ಕರ್ನಾಟಕ/ಕನ್ನಡಿಗರ ಪಾಲಿಗೆ. ಈ ಸಾಲಿಗೆ ಸೇರಿದ, ಸೇರುತಿರುವ ಇನ್ನೊಂದು ವರ್ಗವೆಂದರೆ, ಮುದ್ರಿತ ಅವತರಿಣಿಕೆಯನ್ನೇ("printed version") ಅಂತರ್ಜಾಲದಲ್ಲೂ ಲಭ್ಯಗೊಳಿಸುತ್ತಿರುವ ದಿನಪತ್ರಿಕೆಗಳು. ಕನ್ನಡದ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಕಡೆಗೊಮ್ಮೆ ನೋಟವ ಬೀರೋಣ ಬನ್ನಿ.


ಬೆಳ್ಳಂಬೆಳಗ್ಗೆ ಎದ್ದು, ಬಿಸಿಬಿಸಿ ಕಾಫಿ ಕುಡಿಯುತ್ತಾ ದಿನಪತ್ರಿಕೆ ಓದುವುದರಲ್ಲಿನ ಅನುಭವದ ರೋಚಕತೆ, ತನ್ಮಯತೆ, ಬೇರಾವುದೇ ರೀತಿಯಲ್ಲಿ ಓದಿದಾಗ ಇರುವುದಿಲ್ಲ. ಮುದ್ರಣ ಮಾಧ್ಯಮದ ಗಮ್ಮತ್ತಿರುವುದೇ ಅಲ್ಲಿ.
ಅದಿರಲಿ. ಅಂತರ್ಜಾಲವಾಸಿಗಳಿಗೆ, ಮುದ್ರಿತ ದಿನಪತ್ರಿಕೆಗಳ ಸುಳಿವೂ ಇಲ್ಲದಂತಾಗಿತ್ತು. ಅಂತರ್ಜಾಲ ಆವೃತ್ತಿಯಲ್ಲಿ ಲೇಖನಗಳು ಸಿಗುತ್ತಿದ್ದವೆಯೇ ಹೊರತು, ಪತ್ರಿಕೆಯ ಪುಟ ತಿರುವಿಹಾಕಿದ ಅನುಭವವಾಗುತ್ತಿರಲಿಲ್ಲ, ಒಂದು ಪುಟವೂ ಬಿಡದೆ ಓದುವವರಿಗಂತೂ ಏನೇನೂ ಸಿಗುತ್ತಿಲ್ಲವೇನೋ ಎಂಬ ಅನುಭವ. ಆದರೆ, ಈಗ ಹಾಗಿಲ್ಲ.
ಕನ್ನಡದ ಪ್ರಮುಖ ದಿನಪತ್ರಿಕೆಗಳು ಈಗ ಮುದ್ರಿತ ಅವತರಿಣಿಕೆಯನ್ನೇ ಅಂತರ್ಜಾಲದಲ್ಲಿಯೂ ಲಭ್ಯವಾಗಿಸುತ್ತಿವೆ. ಮನೆಯಲ್ಲಿರುವವರು ದಿನಪತ್ರಿಕೆ ಕೈಲಿ ಹಿಡಿದು ಏನೇನು ಓದುತ್ತಾರೋ, ಅವೆಲ್ಲವನ್ನೂ ಈಗ ನಾವು ನೀವೆಲ್ಲರೂ ಓದಬಹುದು.

ಕನ್ನಡ ಪ್ರಭ
ಅಂತರ್ಜಾಲ ಆವೃತ್ತಿ: http://www.kannadaprabha.com
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.kannadaprabha.com/pdf




ಪ್ರಜಾವಾಣಿ
ಅಂತರ್ಜಾಲ ಆವೃತ್ತಿ: http://www.prajavani.net
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.prajavaniepaper.com




ವಿಜಯ ಕರ್ನಾಟಕ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.vijaykarnatakaepaper.com




ಸಂಯುಕ್ತ ಕರ್ನಾಟಕ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.samyukthakarnataka.com




ಉದಯವಾಣಿ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.pressdisplay.com
ಇದರಲ್ಲಿ, "Lauguages" ಮೆನುವಿನಲ್ಲಿ, ಕನ್ನಡ ಆಯ್ಕೆಮಾಡಿಕೊಳ್ಳಿ. ಆಗ 'ಉದಯವಾಣಿ' ಕಾಣಿಸುತ್ತದೆ.




ಸಂಜೆವಾಣಿ
ಅಂತರ್ಜಾಲ ಆವೃತ್ತಿ: http://www.sanjevani.com
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.sanjevani.com/e_paper/e_paper.htm




ಈ ಸಂಜೆ
ಅಂತರ್ಜಾಲ ಆವೃತ್ತಿ: http://www.eesanje.com
ಈ ಪತ್ರಿಕೆಯ ಮುದ್ರಿತ ಅವತರಿಣಿಕೆಯು ಅಂತರ್ಜಾಲದಲ್ಲಿ ಇನ್ನೂ ಲಭ್ಯವಿಲ್ಲವೆಂದು ಕೇಳಿದ್ದೇನೆ. ಆದಷ್ಟು ಶೀಘ್ರದಲ್ಲಿಯೇ ಬರಲಿ ಎಂದು ಹಾರೈಸೋಣ.




ಮುಗಿಸುವ ಮುನ್ನ:
ಮೇಲ್ಕಂಡ ಸಂಪರ್ಕಗಳು ಬದಲಾವಣೆಗೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಹಾಗೇನಾದರು ಆಗಿ, ಮೇಲಿನ ಸಂಪರ್ಕಗಳು ಕೆಲಸ ಮಾಡದಿರುವುದು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿ. ಹಾಗೆಯೇ, ಕನ್ನಡದ ಇನ್ನಿತರ ಪ್ರಮುಖ ದಿನಪತ್ರಿಕೆಗಳಾವುದಾದರೂ ಇದ್ದು, ಅದರ ಅಂತರ್ಜಾಲ ಆವೃತ್ತಿಯು ಲಭ್ಯವಿದ್ದಲ್ಲಿ, ತಿಳಿಸಿ.

- ಮನ

Link
Comments:
ಓ ಮನವೆ..
ಒಳ್ಳೆ ಕೆಲಸವನ್ನು ಮಾಡಿರುವೆ, ಕನ್ನಡ ದಿನಪತ್ರಿಕೆಗಳ ಕೊಂಡಿಗಳನ್ನು ಒಂದೆಡೆ ಸಂಗ್ರಹಿಸಿ *thumbsup*
 
ಪ್ರಜಾವಾಣಿ, ವಿ.ಕ ಎರಡೇ "ಇ-ಪೇಪರ್" ಆಗಿದ್ದವು ಅನ್ಕೊಂಡಿದ್ದೆ. ಎಲ್ಲವನ್ನೂ ಹಾಕಿ ಒಳ್ಳೇ ಕೆಲಸ ಮಾಡಿದ್ದೀ. ಹಾಗೆಯೇ ರೂಪತಾರ, ತರಂಗ ಹಾಗು ಎಲ್ಲಕ್ಕಿಂತ ಹೆಚ್ಚಾಗಿ ನಾನು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸುಧಾದ ಕೊಂಡಿಗಳನ್ನು ಹಾಕುವುದು

ದಿನಪತ್ರಿಕೆಗಳಲ್ಲಿ ಬರುವ ಸರಣಿ ಲೇಖನಗಳು (ಉದಾ: ಪ್ರಜಾವಾಣಿಯ ಸುವರ್ಣ ಕರ್ನಾಟಕ ಮಾಲೆ), ವಿಶೇಷ ಲೇಖನಗಳು ಹಾಗು ವಾರಪತ್ರಿಕೆಗಳ ಎಲ್ಳಾ ಕಥೆ/ಲೇಖನಗಳನ್ನು ಶೇಖರಿಸಿ ಇಡುವುದು. 2004ರ ತರಂಗ ಸ್ವಲ್ಪ ಮಾಡಿದ್ದೆ, ಆಮೇಲೆ ಸಿಸ್ಟೆಮ್ Crash ಆಗಿ ಎಲ್ಲ ಹೋಯ್ತು :( ಈಗ ಮತ್ತೆ ಶುರು ಮಾಡ್ಬೇಕು. ಇದರ ಬಗ್ಗೆ ಕೆ.ಎ.ನಲ್ಲೂ ಬರೀಬೇಕು
 
"ನಾನು ಕರ್ನಾಟಕದಿಂದ ದೂರವಿದ್ದೇನೆ. ಹಾಗಾಗಿ ಅಲ್ಲಿಯ ವಿಧ್ಯಮಾನಗಳು ನನಗೇನೂ ತಿಳಿದಿಲ್ಲ" ಎಂದು ಯಾರಾದರೂ ಹೇಳಿದರೆ, ಈಗ ಯಾರೂ ನಂಬುವುದಿಲ್ಲ:-) ಓದುತ್ತೇನೆ ಎನ್ನುವವರಿಗೆ ಈಗ ಕನ್ನಡ ಪತ್ರಿಕೆಗಳ ಬರವಿಲ್ಲ !!
 
Kannada patrikegala e-paper edition gala link galannu onde kade kottu odugarige anukoola maadiddeeri.

Thanks.
 
ಎಲ್ಲವೂ e-paper ಆದಾಗ... ಏನಾಗುತ್ತದೆ?

ಇಲ್ಲಿ ನೋಡಿ!
 
ಎಲ್ಲರಿಗೂ ಧನ್ಯವಾದಗಳು.
ಈಗಾಗಲೇ ಈ ಲೇಖನ ಬಹಳ ಉದ್ದವಾದರಿಂದ ಮ್ಯಾಗಜಿನ್ಗಳ ತಾಣಗಳನ್ನು ಇದರಲ್ಲಿ ಹಾಕಲಿಲ್ಲ.
ಪ್ರಮುಖ ವಾರಪತ್ರಿಕೆಗಳು, ಪಾಕ್ಷಿಕಗಳು, ಮಾಸಪತ್ರಿಕೆಗಳ ತಾಣಗಳನ್ನು ಒಂದು ಪ್ರತ್ಯೇಕ ಲೇಖನದಲ್ಲಿ ಹಾಕಬಹುದೆಂದು ಕೊಂಡಿರುವೆ.

ಅಂದಹಾಗೆ, 'ಮ್ಯಾಗಜಿನ್' ಗೆ ಸಮಾನಾರ್ಥಕವಾಗಿ ಕನ್ನಡದ ಯಾವ ಪದ ಬಳಸಬಹುದೆಂದು, ನಿಮ್ಮ ಅಭಿಪ್ರಾಯ?

- ಮನ
 
Magazine ಪದಕ್ಕೆ, ಸಮಾನಾರ್ಥಕ ಪದವಲ್ಲದಿದ್ದರೂ, ಅತ್ಯಂತ ಸಮೀಪದ ಪದವೆಂದರೆ 'ನಿಯತಕಾಲಿಕ' ಎಂದು ಶ್ರೀವತ್ಸ ಜೋಶಿಯವರು ತಿಳಿಸಿದರು. ನನಗೂ ಸಮಂಜಸವೆನಿಸಿತು.
 
ಅದ್ಭುತ ಅನ್ವೇಷಣೆ !

ಮನಕ್ಕೆ ನ-ಮನ !
 
ಹ ಹ :-)
ಧನ್ಯವಾದಗಳು ಅಸತ್ಯಾನ್ವೇಷಿಗಳೇ.
 
ಒಂದೆಡೆ ಕಲೆ ಹಾಕಿ ಒಳ್ಳೆ ಕೆಲ್ಸ ಮಾಡಿದ್ದಿಯ ಮನವೆ. ಬಲ್ ಚೆನ್ದಾಕ್ ಬಂದಿದೆ ಲೇಖನ.

ಇಂತಿ
ಭೂತ
 
ಥ್ಯಾಂಕ್ಸ್ ಭೂತವೇ :)
 
I appreciate the epaper. But did you notice that most (or none?, I did not check all) of them do not give RSS/Atom syndication. I (and more and more readers these days) are finding it impossible to go to the sites unless there is an update in feed readers (like bloglines). And almost all English newspapers, TV Channels' websites provide the content via syndication. It does not necessarily reduce the readership(just the headlines can be sent to feeders), infact it increases the readership. Could someone get the word out to these papers? I would also like to see some blogs from some of the coloumnists(esp of Vijaya Karnataka and I will be mailing them) so that I can subscribe to them individually instead of following the entire paper.
 
Rk,
I share your concern.
RSS/Atom syndication is for kannada news papers possible, only if they bring Unicode versions of their websites. Thats what I believe and someone correct me if I am wrong.

Yes, it is true that English newspapers, TV Channels' websites are providing the contents via syndication. Because, they are in Unicode already.
 
Thanks for the info...we should somehow try to make them get this & convert to unicode and provide syndication...i shall try to contact anyone possible..
 
eshtondu mahiti kannada chitraranga haagu madhyamagaLa bagge ....mechhabekaddu..
 
ಪ್ರಿಯರೆ,

"ಅಂತರ್ಜಾಲದಲ್ಲಿ ಕನ್ನಡ ದಿನಪತ್ರಿಕೆಗಳು" ಎಂಬ ಮಾಹಿತಿಯು ಬಹಳ ಉಪಯುಕ್ತವಾಗಿತ್ತು. ಧನ್ಯವಾದಗಳು.

-ಶ್ರೀನಿವಾಸ, ಬೆಂಗಳೂರು.
 
ಬಹಳ ಒಳ್ಳೆಯ ಕೆಲಸ ಮಾಡಿದಿರಿ. ನಾನು ಪತ್ರಿಕೆಗಳ "ಇ- ಪೇಪರ್" ಲಿಂಕ್‌ಗಳಿಗೆ ಎಲ್ಲಾ ಕಡೆ ಜಾಲಾಡಿದ್ದೇ ಬಂತು. ಏನೂ ಪ್ರಯೋಜನ ಸಿಗಲಿಲ್ಲ. ಅಕಸ್ಮಾತ್ ಇಲ್ಲಿಗೆ ಬಂದುಬಿಟ್ಟೆ ನೋಡಿ. ಅಮೃತ ಕುಡಿದಂತಾಯಿತು.
- ರಮೇಶ ರಾವ್, ಕ್ಯಾಲಿಫೋರ್ನಿಯ
 
tumba upayuktavagide
 
kanndakkondu apoorva koduge
 
it is a nice job. plz attach d "neyathakalika" web adress also.
thanks
bharath
 
Slots – The Real Casino Experience - Dr.
As the name 김제 출장마사지 suggests, slots offer 경산 출장샵 more 순천 출장샵 payouts for 충청북도 출장마사지 free, so they can more easily compete with other slot players, 논산 출장안마 and also have a larger
 
Post a Comment



<< Home
This page is powered by Blogger. Isn't yours?