ಮನದ ಮಾತು

Saturday, August 19, 2006

 

ವಿನಾಯಕ ಜೋಶಿ - ಕನ್ನಡ ಚಿತ್ರರಂಗದ ನವನಾಯಕ ನಟ

ಮುನ್ನುಡಿ:
ಕನ್ನಡ ಚಿತ್ರರಂಗದಲ್ಲಿ, ಬಾಲನಟನಾಗಿ ತಮ್ಮದೇ ಆದ ಛಾಪು ಮೂಡಿಸಿ ನಂತರ ನಾಯಕರಾದವರ ಪಟ್ಟಿ ದೊಡ್ಡದಾಗಿಯೇ ಇದೆ. ಪುನೀತ್, ವಿಜಯ ರಾಘವೇಂದ್ರ, ಸುನಿಲ್ ಮೊದಲಾದವರಿರುವ ಈ ಪಟ್ಟಿಯಲ್ಲಿ ಇದೀಗ ಸ್ಥಾನಪಡೆಯಲು ಸಜ್ಜಾಗಿದ್ದಾರೆ, ವಿನಾಯಕ ಜೋಶಿ


ಬೆಂಗಳೂರಿನ ಶ್ರೀ ವಾಸುದೇವ ಜೋಶಿ ಮತ್ತು ಶ್ರೀಮತಿ ಶಾಲಿನಿ ಜೋಶಿ ದಂಪತಿಗಳಿಗೆ ೧೯೮೭ ಆಗಸ್ಟ್ ೨೫ರಂದು ಜನಿಸಿದ ವಿನಾಯಕ ಜೋಶಿ ಚಿಕ್ಕ ಬಾಲಕನಾಗಿದ್ದಾಗಲೇ ಅಗಾಧ ಪ್ರತಿಭೆಯ ಕುರುಹು ತೋರಿದರು.
೧೯೯೫ರಲ್ಲಿ - ಅಂದರೆ ೮ ವರ್ಷದ ಬಾಲಕನಾಗಿದ್ದಾಗಲೇ ಬೆಳ್ಳಿಪರದೆಗೆ ಕಾಲಿಟ್ಟ ಇವರು, ಒಂದಾದ ಮೇಲೊಂದು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ಅವರ ನಾಯಕತ್ವದಲ್ಲಿನ ಮೊದಲ ಚಿತ್ರ, ನನ್ನ ಕನಸಿನ ಹೂವೆ ಬಿಡುಗಡೆಯಾಗುತ್ತಲಿದೆ.




ವಿನಾಯಕ ಜೋಶಿ ಅಭಿನಯದ ಚಿತ್ರಗಳು

೧ ಪುಟ್ಮಲ್ಲಿ
೨ ನಾವಿದ್ದೀವಿ ಎಚ್ಚರಿಕೆ (ಮಕ್ಕಳ ಚಲನಚಿತ್ರೋತ್ಸವಕ್ಕಾಗಿ ನಾಗಭರಣ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ)
೩ ನಮ್ಮೂರ ಮಂದಾರ ಹೂವೆ
೪ ಸೂತ್ರಧಾರ
೫ ಅಮೃತ ವರ್ಷಿಣಿ
೬ ಸಿಂಹದಮರಿ
೭ ಎಲ್ಲರಂತಲ್ಲ ನನ್ನ ಗಂಡ
೮ ಲಾಲಿ
೯ ವಿಮೋಚನೆ
೧೦ ಮೈ ಡಿಯರ್ ಟೈಗರ್
೧೧ ಆರ್ಯಭಟ
೧೨ ಕುರಿಗಳು ಸಾರ್ ಕುರಿಗಳು (ಬಾಲನಟನಾಗಿ ಕೊನೆಯ ಚಿತ್ರ)
೧೩ ಚಿಟ್ಟೆ
೧೪ ಪಾಂಚಾಲಿ
೧೫ ಕಿಚ್ಚ
೧೬ ಚಿತ್ರ
೧೭ ಅಪ್ಪು
೧೮ ಓಕೆ ಸಾರ್ ಓಕೆ
೧೯ ಕಂಠಿ
೨೦ ಬಾ ಬಾರೋ ರಸಿಕ
೨೧ ಯಶವಂತ್
೨೨ ಆಟೋಗ್ರಾಫ್ ಪ್ಲೀಸ್
೨೩ ಸಖಸಖಿ
೨೪ ೬ ಟೀನ್ಸ್ ಎಂಬ ತಮಿಳು ಚಿತ್ರ
೨೫ ನನ್ನ ಕನಸಿನ ಹೂವೆ

ಇವಗಳಲ್ಲದೇ, ಬಿಡುಗಡೆಯಾಗಬೇಕಿರುವ ಚಿತ್ರಗಳು ಸುಮಾರು ಏಳೆಂಟು.

ವಿನಾಯಕ ಜೋಶಿಯವರು ಪಡೆದ ಪ್ರಶಸ್ತಿ ಪುರಸ್ಕಾರಗಳು ಬಹಳಷ್ಟು.

೧೯೯೬-೯೭ "ಅತ್ಯುತ್ತಮ ಬಾಲನಟ" ರಾಜ್ಯ ಪ್ರಶಸ್ತಿ.

೧೯೯೭-೯೮ ಅಮೃತವರ್ಷಿಣಿ ಚಿತ್ರದಲ್ಲಿನ ನಟನೆಗಾಗಿ, ೧೯೯೭-೯೮ನೇ ಸಾಲಿನ "ಅತ್ಯುತ್ತಮ ಬಾಲನಟ" ಎಂದು ಆರ್ಯಭಟ ಪ್ರಶಸ್ತಿ .
೧೯೯೮-೯೯ ಕಲ್ಯಾಣಮ್ಮ ಮಕ್ಕಳ ಕೂಟ ಪ್ರಶಸ್ತಿ .

ಡ್ರೀಮ್ಸ್ ಇನ್ ಡ್ರೀಮ್ಸ್ ಯುವಕ ಸಂಘ (Dreams in dreams youth association) ನೀಡಿರುವ "ಚಾರ್ಮಿಂಗ್ ಸ್ಟಾರ್" ಎಂಬ ಬಿರುದು ,
ನಾಡಿನಾದ್ಯಂತ ನಡೆದ ವಿವಿಧ ಸಭೆ ಸಮಾರಂಭಗಳಲ್ಲಿ, ಸುಮಾರು ೩೦೦ಕ್ಕೂ ಹೆಚ್ಚಿನ ಸನ್ಮಾನಗಳು, ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ಸುಮಾರು ೩೩೦ ಕಲಾವಿದರು ಭಾಗವಹಿಸಿದ್ದ, ಕಳೆದ ವರ್ಷದ(೨೦೦೫) 'ಹೆಚ್.ನರಸಿಂಹಯ್ಯ ನಾಟಕೋತ್ಸವ'ದಲ್ಲಿನ ನಟನೆಗೆ 'ಅತ್ಯುತ್ತಮ ನಟ' ಬಹುಮಾನ ಪಡೆದರು.

ಇವರದೇ ಆದ ಒಂದು ನಾಟಕ ತಂಡವಿದೆ, ಹೆಸರು ದ್ಯುತಿ
೧೯೯೫ರಲ್ಲಿ ಅತ್ಯುತ್ತಮ ನೃತ್ಯಪಟು ಎಂಬ ರಾಜ್ಯಮಟ್ಟದ ಪ್ರಶಸ್ತಿಯು ಪಡೆದಿದ್ದರು.


ಬಾಲನಟನಾಗಿ(ವಿಶೇಷವಾಗಿ ನಮ್ಮೂರ ಮಂದಾರ ಹೂವೆ ಮತ್ತು ಅಮೃತವರ್ಷಿಣಿ ಚಿತ್ರಗಳಲ್ಲಿ) ಜನಮೆಚ್ಚುಗೆ ಗಳಿಸಿದ್ದ ವಿನಾಯಕ ಜೋಶಿ, ಈಗ ತಮ್ಮ ವಿನೂತನ ವರಸೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ.
ತಂದೆ ವಾಸುದೇವ ಜೋಶಿಯವರೇ ನಿರ್ಮಿಸಿರುವ ಈ ಚಿತ್ರವು ಎಲ್ಲ ರೀತಿಯಿಂದಲೂ ಅವರೆಲ್ಲರ ಕನಸಿನ ಹೂವಾಗಿದೆ. ಈ ಹೂವು ಕನಸಿನಲ್ಲದೇ, ನನಸಿನಲ್ಲಿಯೂ ಹೂವಾಗಿ, ಅದರ ಪರಿಮಳವನ್ನು ಪಸರಿಸಲಿ ಎಂದು ಹಾರೈಸೋಣವೇ?




ಸ್ವಾರಸ್ಯ:
ಇಪ್ಪತ್ತೈದಕ್ಕೂ (೨೫) ವಿನಾಯಕ ಜೋಶಿಯವರಿಗೂ ವಿಶೇಷವಾದ ನಂಟು ಇದೆಯೇ? ಗಮನಿಸಿ ನೋಡಿ. ಇವರ ಜನ್ಮ ದಿನಾಂಕ ಆಗಸ್ಟ್ ೨೫, ಇವರ ಚಿತ್ರ ಬಿಡುಗಡೆಯಾಗುತ್ತಿರುವುದೂ ಆಗಸ್ಟ್ ೨೫ ಮತ್ತು ಬಿಡುಗಡೆಯಾಗಿರುವ ಚಿತ್ರಗಳ ಲೆಕ್ಕದಲ್ಲಿ ನನ್ನ ಕನಸಿನ ಹೂವೆ, ಇವರ ಇಪ್ಪತ್ತೈದನೇ ಚಿತ್ರ.

ಚಿತ್ರವು ಯಶಸ್ವಿಯಾಗಲಿ ಎಂದು ಹೃತ್ಪೂರ್ವಕವಾಗಿ ಶುಭಹಾರೈಸುತ್ತೇನೆ!
~ ಮನ
Link
Comments:
Hi mana,
very nice article, thumba detailed aagi chennagi bandide....VJ nodidre kushi padthane...
 
ಮನ,

ವಿನಾಯಕ ಜೋಶಿಯವರ 'ನನ್ನ ಕನಸಿನ ಹೂವೇ' ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

ವಿ.ಜೊ ಎಲ್ಲೋ ಕಾಣೆಯಾದರೂ ಅಂದಕೊಂಡುವಾಗಲೇ ಅವರ ನಾಯಕತ್ವದ ಚಿತ್ರ ಬರುತ್ತಿರುವುದು ಒಳ್ಳೆ ಸುದ್ದಿ.ಕನ್ನಡದ ಇನ್ನೊಂದು ಬಾಲ ಪ್ರತಿಭೆ ನಾಯಕನಾಗಿ ಹೆಸರು ಮಾಡಲಿ..
 
ಮನವೇ,

ಒಳ್ಳೆಯ ವಿಷಯ. ವಿನಾಯಕನ ಚಿತ್ರ, ಎಶಸ್ವಿಯಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೆನೆ. ಬಾಲನಟನಾಗಿ ಮೆರೆದವನು, ನಾಯಕನಟನಾಗಿಯು ಮೆರೆಯಲಿ.

ಭೂತ
 
ಉದಯ ಟಿವಿಯ "ಬಯೋಸ್ಕೋಪ್" ಕಾರ್ಯಕ್ರಮದಲ್ಲಿ "ನನ್ನ ಕನಸಿನ ಹೂವೆ" ಚಿತ್ರದ ತುಣುಕುಗಳನ್ನು ನೋಡಿದೆ. :)
"ಜೋಶಿ ಚಿತ್ರ" ಕ್ಕೆ ಶುಭ ಹಾರೈಕೆಗಳು!
 
ಪ್ರತಿಕ್ರಿಯಿಸಿ, ವಿನಾಯಕ ಜೋಶಿಗೆ ಜೋಶ್ ಬರುವಂತೆ ಶುಭಹಾರೈಸಿರುವ ಎಲ್ಲರಿಗೂ ಧನ್ಯವಾದಗಳು.

ಇನ್ನು ನಾಲ್ಕುದಿನಗಳು ಮಾತ್ರ ಉಳಿದಿವೆ.

DG, ಮೊದಲ ವಿಮರ್ಶೆ ನಿನ್ನಿಂದಾನೇ ಬರ್ಬೇಕು. ಮೊದಲ ದಿನದ ಮೊದಲ ಪ್ರದರ್ಶನ ನೋಡಿಬಂದ ಕೂಡಲೆ ನಮ್ಮೆಲ್ಲರಿಗೂ ಹೇಳಪ್ಪ. :)
 
ವಾಹ್ ವಿನಾಯಕ ಜೋಶಿಯವರ ಬಗ್ಗೆ ನನಗೆ ಇಷ್ಟೆಲ್ಲಾ ಗೊತ್ತಿರ್ಲಿಲ್ಲ. ಇಷ್ಟೊಂದು ಪ್ರಸಿದ್ಧವಾಗಿದ್ದಾರಾ? ಇಷ್ಟೊಂದು ಚಿತ್ರಗಳಲ್ಲ್ಲಿ ನಟಿಸಿದ್ದಾರಾ? ಬಹಳ ಸೌಮ್ಯವಾದ ಹುಡುಗ, ನಮ್ಮಂತಹವರ ಜೊತೆಗೂ ಬೆರೆಯುತ್ತಾನೆ.

ಹೊಸ ಚಿತ್ರ ಒಳ್ಳೆಯ ಹೆಸರು, ಖ್ಯಾತಿ, ಸಂಪದವನ್ನು ತರಲಿ. ಅವನಿಗಾಗಿ ನನ್ನ ವಿಶೇಷ ಪ್ರಾರ್ಥನೆ.

ಮಾಹಿತಿಯನ್ನು ಕೊಟ್ಟಕ್ಕೆ ಮನಕ್ಕೊಂದು ಟೋಪಿ.
 
ಮನ ಅವರೆ,
ವಿಜೋಗೆ ನಮ್ಮದೂ ಒಂದು ಹಾರೈಕೆ ತಿಳಿಸಿ.

ಎಚ್ಚರಿಕೆ:
ಮಾವಿನವರಿಂದ ಟೋಪಿ ಹಾಕಿಸಿಕೊಳ್ಳಿ.... ತುಂಬಾ ಒಳ್ಳೆಯ ಟೋಪಿ... :)
 
ನಾನು ಎಷ್ಟೊಂದು ಚಿತ್ರಗಳನ್ನು ನೋಡೇ ಇಲ್ಲ!
ವಿನಾಯಕ ಜೋಶಿಯವರ ಬಗ್ಗೆ ಸಾಕಷ್ಟು ತಿಳಿಸಿಕೊಟ್ಟಿದ್ದೀರಿ.
 
hai , nivu madid yalla film nodinri alla baal chanagi edavree........... mundha nu hange madreee.........

ALL THE BEST FOR YOUR FUTURE FICTURES
@$VISHWA@$
 
Post a Comment



<< Home
This page is powered by Blogger. Isn't yours?