ಮನದ ಮಾತು

Wednesday, July 19, 2006

 

ಜಿನಾಡೇನ್ ಜಿಡಾನ್ ಸಾಹಸ - ವಿವಿಧ ದೃಷ್ಟಿಕೋನಗಳು

ಮುನ್ನುಡಿ:
ಸುಮಾರು ಒಂದು ತಿಂಗಳಕಾಲ ಪ್ರಪಂಚದಾದ್ಯಂತ ಕಾತುರದಿಂದ ನೋಡಿದ, ಅನುಭವಿಸಿದ ಫುಟ್ ಬಾಲ್ ಆಟ ಅಂತಿಮ ಪಂದ್ಯದಲ್ಲಿನ ಕೆಲವು ರೋಚಕ ಕ್ಷಣಗಳೊಂದಿಗೆ 'ಮನ'ಸೆಳೆಯಿತು.
ಅತ್ಯಂತ ರೋಚಕ ದೃಶ್ಯವೊಂದನ್ನು ಅವರವರ ಮೂಗಿನ ನೇರಕ್ಕೆ ಹೇಗೆ ನೋಡುತ್ತಾರೆ ಎಂಬುದಕ್ಕೆ ಅದ್ಭುತವಾತ ಸೃಜನಶೀಲತೆಯಿಂದ ಯಾರೋ ತಯಾರಿಸಿರುವ ಈ ದೃಶ್ಯಾವಳಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಈ ದೃಶ್ಯಗಳನ್ನು ತಯಾರಿಸಿದ ವ್ಯಕ್ತಿಗೆ *ಟೋಪಿಗಳು ಕೆಳಗೆ*ಜಿನಾಡೇನ್ ಜಿಡಾನ್ ಗುಮ್ಮಿದ ದೃಶ್ಯದ ಗಮ್ಮತ್ತು ಈ ಲೇಖನದ ಜೀವಾಳ.
ಇದರ ಬಗ್ಗೆ ಆಗಲೇ ಹಲವಾರು ಕಾರ್ಟೂನ್, ಜೋಕ್, ಬ್ಲಾಗುಗಳು ಬಂದಿವೆ.
ಉದಾ: ಹೆಚ್.ಪಿ.ಎನ್ ಅವರ ಈ ಬ್ಲಾಗು ಬಹಳ ಮಜವಾಗಿದೆ. :)

ಈಗ ದೃಶ್ಯಾವಳಿ ನೋಡೋಣ ಬನ್ನಿ.


ಜರ್ಮನ್ನರ ದೃಷ್ಟಿಕೋನದಲ್ಲಿ....
ಫ್ರೆಂಚರ ದೃಷ್ಟಿಕೋನದಲ್ಲಿ.....
ಇಟಲಿಯನ್ನರ ದೃಷ್ಟಿಕೋನದಲ್ಲಿ.....

ಕಾಶ್ಮೀರದ ಜನತೆಯ ದೃಷ್ಟಿಕೋನದಲ್ಲಿ.....
ಥ್ರಿಲ್ಲರ್ ಮಂಜು ದೃಷ್ಟಿಕೋನದಲ್ಲಿ.....

ಮುಗಿಸುವ ಮುನ್ನ:

ಇದರಲ್ಲಿ ಪೂರ್ವಾಗ್ರಹಗಳೊಂದಿಗೆ ಮೂಗಿನ ನೇರಕ್ಕೆ ನೋಡಿದ ದೃಷ್ಟಿಕೋನಗಳು(POV) ಯಾವು ಯಾವು? ವಸ್ತುನಿಷ್ಠ ದಷ್ಟಿಕೋನ (ನ್ಯೂಟ್ರಲ್ ಪಿಓವಿ) ಯಾವುದು? ನೀವೆ ನಿರ್ಧರಿಸಿ. ಜಿನಾಡೇನ್ ಜಿಡಾನ್ ಗೊಂದು ಹಸನ್ಮುಖದ ವಿದಾಯ. :)

~ ಮನ

Link
Comments:
ಹಂಸಾಭಿಮಾನಿಗಳ ದೃಷ್ಟಿಕೋನ:

ಜಿಡಾನ್ ಸಹ ಹಂಸಲೇಖ ವಿರಚಿತ ಪ್ರೇಮಲೋಕಗೀತೆ "ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ..." ಯನ್ನು ಮೆಚ್ಚಿ ಬಾಯಿಪಾಠ ಮಾಡಿಕೊಂಡಿದ್ದನಂತೆ. "ನಾನ್ ತುಂಬಾ ಕಟ್‍ನಿಟ್ಟು... ತಲೆಕೆಟ್ರೆ ಕಿಕ್‍ಔಟು..." ಅವನ ಮೋಸ್ಟ್ ಫೇವರಿಟ್ ಲೈನು. ಅದನ್ನೇ ಆಟದಮೈದಾನದಲ್ಲೂ ಗುನುಗುನಿಸುತ್ತಿದ್ದವ, ಮ್ಯಾಟರಾತ್ಸಿ (ಏನೋ ಬೈಯುತ್ತ?) ಎದುರಿಗೆ ಬಂದಾಗ, "ತಲೆ ಕೊಟ್ರೆ ಕಿಕ್‍ಔಟು..." ಮಾಡಿಬಿಟ್ಟ ಜಿದ್ದಿನ ಜಿಡಾನ್!
 
ಜಿಡಾನ್‍ಗೆ ಹಸುಮುಖದ ವಿದಾಯ [:ಹ][:ಹ]
 
ಅವರವರ ಭಾವಕ್ಕೆ, ಅವರವರ ಭಕುತಿಗೆ :)

ಜಿಡಾನ್ ಸಹನೆ ಕಳೆದುಕೊಳ್ಳಬಾರದಿತ್ತು. ತಾಳಿದ್ದರೆ ಬಾಳುತ್ತಿದ್ದ :)
 
ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. :)

ಎಸ್.ಜೆ: ನಾನಿಷ್ಟು ದಿನವೂ ಆ ಸಾಲು 'ತಲೆಕೆಟ್ಟರೆ ಗೆಟ್ ಔಟು' ಎಂದು ಭಾವಿಸಿದ್ದೆ. ಹಾಗೆ ಕೇಳಿಸುತ್ತಿತ್ತು ಕೂಡ.
ಅದಿರಲಿ. ಇಲ್ಲಿ ಕಿಕ್ ಔಟು ಮಾಡಲು ಪ್ರಯತ್ಸಿಸಿದ ಜಿಡಾನ್ ಸ್ವತಃ ಅವನೇ red card ಪಡೆದು ಗೆಟ್ ಔಟ್ ಆದದ್ದಂತೂ ನಿಜ. :ಹ
 
ಮನ,

ಜಿದ್ದಾನೆಗೆ ತಕ್ಕುದಲ್ಲದ ವಿದಾಯವಾಗಿತ್ತು ಅದು..
ಎನು ಮಾಡೋದು ಎಲ್ಲಾ ಆ ಬುರುಡೆ ಪ್ರಭಾವ ..

ಒಬ್ಬ ಪುಟ್ಬಾಲ್ ಮಾಂತ್ರಿಕನಿಗೆ ನಮನಗಳು..
 
ಹ ಹ ಹ....

ರಾಮಾಚಾರಿಯ "ಬುರುಡೇ ಬುರುಡೆ" ಹಾಡು ಮತ್ತೆ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದ "ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ" ಹಾಡುಗಳು ನೆನಪಾದವು.

ಜಿಡಾನೆ, ಬುರುಡೆಯನ್ನು ಉಪಯೋಗಿಸದೆ, ಬುರುಡೆ ಒಳಗಿರುವುದನ್ನು ಉಪಯೋಗಿಸಿ ತಾಳ್ಮೆ ಕಳೆದುಕೊಳ್ಲದಿದ್ದರೆ.... ಅಯ್ಯೋ ಬಿಡಿ, "ರೆ...ಪ್ರಪಂಚಕ್ಕೆ ಕೊನೆಯೇ ಇಲ್ಲ". :)
 
ನೋಡಮ್ಮ 'ಮನ'ವೇ ಕೇಳಮ್ಮ ಸರಿಯಾಗಿ
ಹಾಡಿನ ಲಿರಿಕ್ಸು ಏನೆಂದು ಕಲಿಯೋಕಾಗಿ...

ವರ್ಜಿನಲ್ ಹಾಡಿನಲ್ಲಿ ಕಿಕ್‍ಔಟ್ ಅಂತಲೇ ಇರೋದು. ಗೆಟ್‍ಔಟ್ ಅಂತ ಅಲ್ಲ. ಬೇಕಿದ್ದರೆ ಇನ್ನೊಮ್ಮೆ ಆ ಹಾಡನ್ನು ಆಲಿಸುವಂಥವರಾಗಿ!

* * * *

"ರೆ...ಪ್ರಪಂಚಕ್ಕೆ ಕೊನೆಯೇ ಇಲ್ಲ".
ಹೌದು. ಆಬಗ್ಗೆ ವಿಚಿತ್ರಾನ್ನದಲ್ಲಿ ಒಮ್ಮೆ ಎಕ್ಸ್-ರೆ ಹಾಯಿಸಲಾಗಿತ್ತು!
 
ಉಸ್ಕಿ ಲಕಡಿ ದಿಚ್ಚಿ ಡಮರ್(ಅರ್ಥೆ ಕೇಳ್ಬೇಡಿ, ನನ್ಗು ಗೊತ್ತಿಲ್ಲ).

ಚೆನ್ನಗಿ ಬಂದಿದೆ ಲೇಕನ :)
 
Manada Maathu is trying zidane effects on Mental Dot Com. O.K. No problems. Mana has been appointed as a leader of Mental Dot Com Security force. Please come and report for the duty.
 
Post a Comment

Links to this post:

Create a Link<< Home
This page is powered by Blogger. Isn't yours?