ಮನದ ಮಾತು

Thursday, August 03, 2006

 

ಇಂಚರ - ಕನ್ನಡ ಅಂತರ್ಜಾಲ ರೇಡಿಯೊ

ಮುನ್ನುಡಿ:
ಉದಯ ಟಿವಿ ನೋಡುವಾಗ ಬೇಜಾರಾದಾಗ, ಈಟೀವಿ ಕನ್ನಡ; ಈಟಿವಿ ಕನ್ನಡ ಬೇಜಾರಾದಾಗ ಉದಯ ಟಿವಿ.
ಹೀಗೆ ಚಾನೆಲ್ ಬದಲಾಯಿಸುವುದು ನಮಗೆಲ್ಲರಿಗೂ ತಿಳಿದೇ ಇದೆ. ಇದೇ ಕಾರಣಕ್ಕೆ, ಟಿವಿ ನೋಡೋದಕ್ಕೆ ಕುಳಿತುಕೊಳ್ಳುವಾಗಲೇ ರಿಮೋಟ್ ಕಂಟ್ರೋಲ್ ಹಿಡಿದು ನಂತರ ಜಾಗ ಹಿಡಿಯುತ್ತೇವೆ. :)
ಇದು ದೂರದರ್ಶನದ ಮಾತಾಯಿತು. ಅಂತರ್ಜಾಲ ನಿವಾಸಿಗಳಿಗೆ?
'ಕನ್ನಡ ಕಸ್ತೂರಿ' ನಾವು ನೀವೆಲ್ಲರೂ ಕೇಳಿ, ಮೆಚ್ಚಿಕೊಂಡಿರುವ ಅಂತರ್ಜಾಲ ಕನ್ನಡ ರೇಡಿಯೊ. ಕನ್ನಡಆಡಿಯೋ.ಕಾಂ ಕೊಡುಗೆಯಾಗಿರುವ ಈ ವಾಹಿನಿಯು, ಅಂತರ್ಜಾಲದಲ್ಲಿನ ಪ್ರಪ್ರಥಮ ಕನ್ನಡ ರೇಡಿಯೊ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

http://www.kannadaaudio.net ಈ ಅಂತರ್ಜಾಲ ಕನ್ನಡವಾಹಿನಿಯ ಅಧಿಕೃತ ತಾಣ.

ಇಂದು ನನ್ನ ಕಿವಿಮುಟ್ಟಿದ ಹೊಸ ವಾಹಿನಿಯೆಂದರೆ, ಇಂಚರ!
ಹೆಸರೇ ಇಷ್ಟು ಇಂಪಾಗಿದೆ, ಇನ್ನು ಹಾಡುಗಳು ಹೇಗಿರಬಹುದೆಂದು ಕಾತುರದಿಂದ ಕೇಳಿದ ನನಗೆ, ಆಶಾಭಂಗವಾಗಲಿಲ್ಲ.
ಹಳೆಯ ಸುಮಧುರ ಗೀತೆಗಳು, ಇತ್ತೀಚಿನ ಗೀತೆಗಳು, ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿದ ಹೆಸರಿಗೆ ತಕ್ಕಂತಹ ಪ್ಲೇಲಿಸ್ಟ್ ಇತ್ತು.
ಈ ರೇಡಿಯೋವನ್ನು ಅಂತರ್ಜಾಲದಲ್ಲಿನ ಕೇಳುಗರಿಗೆ ಕಾಣಿಕೆಯಿತ್ತಿರುವರು ಕನ್ನಡಟೊರೆಂಟ್ಸ್ ಸಮುದಾಯ.

ಕಿವಿಗಿಂಪಾದ ಇಂಚರವನ್ನು ಆಲಿಸಬಹುದಾದ ಲಿಂಕ್:
http://www.kannadatorrents.com:8000/listen.pls


ಇಂಚರವನ್ನು ನಮ್ಮೆಲ್ಲರಿಗರ್ಪಿಸಿರುವ ಕನ್ನಡಟೊರೆಂಟ್ಸ್ ನಿರ್ವಾಹಕ ಮಂಡಳಿಗೆ ಧನ್ಯವಾದಗಳು, ಹಾಗೂ ಈ ವಾಹಿನಿಯನ್ನು ಯಶಸ್ವಿಯಾಗಿ ಪ್ರಾರಂಭಿಸಿದಕ್ಕೆ ಹಾರ್ದಿಕ ಅಭಿನಂದನೆಗಳು.

ಅದೂ ೨೪/೭ ಮತ್ತಿದೂ ೨೪/೭. ಆದರೆ ಎರಡೂ ಸೇರಿ, ೪೮/೭ ಮಾಡಲು ಸಾಧ್ಯವಿಲ್ಲ. ದಿನಕ್ಕೆ ೨೪ ಗಂಟೆಗಳು ಮಾತ್ರ. :)

ಕಿವಿಗಳೆರಡಿದ್ದರೂ ಸಂಗೀತವನ್ನಾಸ್ವಾಧಿಸಬಹುದಾದ ಮನಸ್ಸು (ಮನ!?) ಒಂದೇ!


ಮುಗಿಸುವ ಮುನ್ನ:

ಕನ್ನಡ ಕಸ್ತೂರಿಯ ಕಂಪು
ಇಂಚರದ ಇಂಪು
ಕನ್ನಡಿಗರ ಹೃದಯಕೆರೆಯಲಿ ತಂಪು!~ ಮನ
Link
Comments:
ಹೊಸ ರೇಡಿಯೋ ಪರಿಚಯಿಸಿದ್ದಕ್ಕೆ ಧನ್ಯವಾದಗಳು, ಈಗಲೇ ಆನ್ ಮಾಡ್ತೀನಿ."ಹದಿನಾಲ್ಕು ವರ್ಷ ವನವಾಸದಿಂದ...." ಹಾಡು ಬರ್ತಾ ಇದೆ ಈಗ :)

ನೀವು ಯೋಚಿಸಿದಂತೆ ಕನ್ನಡ ಕಸ್ತೂರಿ, ಇಂಚರ ಎರಡನ್ನು ಮಿಕ್ಸ್ ಮಾಡಿ ಕೇಳಲು ದಿನದಲ್ಲಿ 48 ಘಂಟೆಗಳು ಇಲ್ಲದಿದ್ದರೂ, ಒಂದು ಸೈಟ್ ಡೌನ್ ಆದಾಗ ಕೇಳಲು ಇನ್ನೊಂದು ಈಗ ಸೈಟ್ ಇರತ್ತೆ :)

ಅಂತರ್ಜಾಲದಲ್ಲಿ ಕನ್ನಡ ಪ್ರಕಾಶಿಸುತ್ತಿದೆ!!
 
ಓ ಮನವೆ... ಇಂಚರವನ್ನು ಪರಿಚಯಿಸಿದ್ದಕ್ಕೆ.. ಧನ್ಯವಾದಗಳು.. [:)]
 
ಅಂತರ್ಜಾಲ ನಿವಾಸಿಗಳ ಕಥೆ ಇರಲಿ, ಇನ್ನು ಅನಿವಾಸಿಗಳ ಕಥೆ ಕೇಳಿ - ನೋಡೋಕೆ ಬೇಕಾದಷ್ಟು ಚಾನೆಲ್ಲುಗಳಿದ್ದರೂ ಕನ್ನಡ ಕೇಳೋದಿಲ್ಲ, ಕನ್ನಡ ಬರೋ 'ಉದಯ' ನೋಡ್ದೋರು ಯಾರೂ ಅಷ್ಟೊಂದು ಮೆಚ್ಚುಗೆಯ ಮಾತನಾಡಲ್ಲ, ಸದ್ಯಕ್ಕೆ ರೇಡಿಯೋಕ್ಕೆ ಜೋತುಬಿದ್ದುಕೊಳ್ಳುತ್ತೇನೆ - ರಿಮೋಟ್ ಬಗ್ಗೆ ಇನ್ನೊಮ್ಮೆ ತಲೆಕೆಡಿಸಿಕೊಂಡರಾಯಿತು!
 
ತ್ರಿ, ರಾಮಪ್ರಿಯ, ಸತೀಶ್ ಅವರಿಗೆ ಧನ್ಯವಾದಗಳು.

ಸತೀಶ್ ಅವರೆ, ನಿಜ, ಹಲವಾರು ಅನಿವಾಸಿಗಳು ಆ ರೀತಿ ವರ್ತಿಸುತ್ತಾರೆ. ಆದರೆ ಅದನ್ನು ಜನರಲೈಸ್ ಮಾಡಿ ಹೇಳದೇ ಇರೋಣ. ಕನ್ನಡದಲ್ಲೇ ಮುಳುಗಿಹೋಗಿರುವ ಸಾಕಷ್ಟು ಮಂದಿ ಅನಿವಾಸಿಗಳೂ ಇದ್ದಾರೆ.

ಕನ್ನಡವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು(ಅಂತರ್ಜಾಲದಲ್ಲಿ, ವಿದೇಶಗಳಲ್ಲಿ, ತಾಯ್ನಾಡಿನಲ್ಲಿ ) ನಾವೆಲ್ಲರೂ ನಮ್ಮ ಕೈಲಾದ ಸೇವೆ (ಕರ್ತವ್ಯ ಕೂಡ) ಮಾಡೋಣ.
 
ಮನ,
ಹೊಸ ಆಕಾಶವಾಣಿ ಅಥವ ಅಂತರ್ಜಾಲವಾಣಿ ಬಗ್ಗೆ ತಿಳಿಸಿದಕ್ಕೆ ವಂದನೆಗಳು!
 
ಓ... ನಾವೆಲ್ಲಾ ಓದಿಸುತ್ತೇವೆ... ನೀವು ಕೇಳಿಸುತ್ತೀರಾ....

Thanks ಮನಸಿಗರಿಗೆ !
 
ಸಕ್ಕತ್ ಮನವೇ,

ಇದನ್ನು ಇಲ್ಲಿ ಪರಿಚಯಿಸಿ ಬಹಳ ಒಳ್ಳೆ ಕೆಲ್ಸ ಮಾಡಿರುವೆ.
ಇಂಚರದ ಪಂಜರದಲ್ಲಿ ಬಂದಿಯಾಗದೆ, ಸಂಚಾರಿಸುತ್ತ ಇರಲಿ :)

ಭೂತ
 
ಶಿವ್, ಅಸತ್ಯಾನ್ವೇಷಿಗಳೇ, ಭೂತವೇ: ಧನ್ಯವಾದಗಳು.

ಅಸತ್ಯಾನ್ವೇಷಿಗಳೇ, ಕೇಳಿಸುತ್ತಿರುವುದು ನಾನಲ್ಲ. ಕನ್ನಡ ಟೊರೆಂಟ್ಸ್ ಸಮುದಾಯದವರು. ನನಗೆ ತಿಳಿದುದನ್ನು ಇತರರೊಡನೆ ಹಂಚಿಕೊಳ್ಳುತ್ತಿರುವೆನಷ್ಟೆ :)
 
That's a great story. Waiting for more. Sealy power washers Cialis online from dreampharmaceuticals Jewelry schools Dvd dual deck dvd propecia Spicer stationery
 
That's a great story. Waiting for more. Online valtrex order online mesothelioma lawyer cancer lawsuit attorney21 long term care insurance premiums in london
 
You have an outstanding good and well structured site. I enjoyed browsing through it film editing schools
 
Post a Comment

Links to this post:

Create a Link<< Home
This page is powered by Blogger. Isn't yours?