ಮನದ ಮಾತು

Sunday, July 16, 2006

 

Firefox ಬ್ರೌಸರಿನಲ್ಲಿ ಕನ್ನಡ ಬ್ಲಾಗಿನ ಸಮಸ್ಯೆ - ಪರಿಹಾರ

ಮುನ್ನುಡಿ:
Blogspot.com ಡೊಮೈನಿನಲ್ಲಿರುವ ಬಹುತೇಕ ಕನ್ನಡ ಬ್ಲಾಗ್‍ಗಳ ಶೀರ್ಷಿಕೆಗಳು ಮತ್ತು ಅಲ್ಲಿನ ಲೇಖನಗಳ ಶೀರ್ಷಿಕೆಗಳು ಫೈರ್‍ಫಾಕ್ಸ್ ಬ್ರೌಸರಿನಲ್ಲಿ ವಿಕೃತವಾಗಿ ಕಾಣುವುದನ್ನು ಸಿಸ್ಯ ಅವರು ಮನ'ದ ಗಮನಕ್ಕೆ ತಂದರು. ಈ ಸಮಸ್ಯೆಯ ಬಗ್ಗೆ ಒಂದು ನೋಟ ಮತ್ತು ಪರಿಹಾರದ ಪ್ರಯತ್ನ ಈ ಲೇಖನದ ಉದ್ದೇಶ.


ಈ ಚಿತ್ರವನ್ನು ಗಮನಿಸಿ.

ನನ್ನ ಬ್ಲಾಗಿನ ಮುಖ್ಯಪುಟ ಫೈರ್‍ಫಾಕ್ಸ್ ಬ್ರೌಸರಿನಲ್ಲಿ ಹೀಗೆ ಕಾಣುತ್ತಿತ್ತು. ಇದನ್ನು ದಿನವೂ ನೋಡುತ್ತಿದ್ದೆನಾದರೂ, InternetExplorer ನಲ್ಲಿ ಸರಿಯಾಗಿ ಕಾಣುತ್ತಿದ್ದುದರಿಂದ, ಇದು "ನನ್ ಕಂಪ್ಯೂಟರ್‍ನ firefoxನಲ್ಲೇ ಏನೋ ಪ್ರಾಬ್ಲಂ ಇರ್ಬೇಕು" ಎಂದು ಉದಾಸೀನ ಮಾಡಿ ಸುಮ್ಮನಾಗಿದ್ದೆ. ಆದರೆ ಇದು ನನ್ನೊಬ್ಬನ ಬ್ಲಾಗಿನ ಸಮಸ್ಯೆಯಲ್ಲ, ಕನ್ನಡದ ಬಹುತೇಕ ಬ್ಲಾಗುಗಳಿಗೆ ಕಾಡುತ್ತಿರುವ ಫೈರ್‍ಫಾಕ್ಸ್ ಪಿಡುಗು ಎಂದು ನನಗೆ ಮನದಟ್ಟು ಮಾಡಿಕೊಟ್ಟವರು ಫೈರ್‍ಫಾಕ್ಸ್ ಕಟ್ಟಾಭಿಮಾನಿಯಾದ ಸಿಸ್ಯ.

ಈಗ ಈ ಕೆಲವು ಕನ್ನಡ ಬ್ಲಾಗುಗಳನ್ನು ಗಮನಿಸಿ.
ಸುಸಂಕೃತರ ಅವಲೋಕನ: susheelsandeepmurali.blogspot.com

ಭೂತದ ಕಾವ್ಯ ಸುಧೆ: kaavyasudhe.blogspot.com

ಮಂಜೇಗೌಡರ ಸಕಲ ಶರಣಾರ್ಥಿಗಳು: sakala.blogspot.com


ಶ್ರೀಮಾತಾ ಅವರ ಹೀಗೆ ಸುಮ್ನೆ: heegesummne.blogspot.com


ಶಿವಶಂಕರ್ ಅವರ 'ಪಾತರಗಿತ್ತಿ ಪಕ್ಕ': chittey.blogspot.com

ಪಚ್ಚಿ + ಸುಸ್ ಕಾಂಬೋ ಕನ್ನಡಕಸ್ತೂರಿ: kannadakastoori.blogspot.com


ಓಲೆಗರಿ: olegari.blogspot.com


ಮನಸ್ವಿನಿ-ಮನ: manaswini-mana.blogspot.com



ಸಾಕಲ್ಲವೇ ಸಧ್ಯಕ್ಕೆ, ಇಷ್ಟು ಬ್ಲಾಗುಗಳು? ಮೇಲೆ ಹಾಕಿರುವ ಚಿತ್ರಗಳ ಮೂಲಕ, ಈ ಬ್ಲಾಗುಗಳಲ್ಲಿನ ಹೆಸರಿನ display ಸಮಸ್ಯೆಯ ಅರಿವು ನಿಮಗಾಯಿತಲ್ಲವೇ?

ಸಮಸ್ಯೆಗೆ ಕಾರಣ:
ಈ ಸಮಸ್ಯೆಗೆ ಮೂಲಕಾರಣ ಅಕ್ಷರಗಳ ಸ್ಪೇಸಿಂಗ್ ("letter-spacing").
ಸ್ಪೇಸಿಂಗ್ ಅಂದರೆ, ಒಂದು ಅಕ್ಷರಕ್ಕೂ ಮುಂದಿನ ಅಕ್ಷರಕ್ಕೂ ನಡುವೆ ಎಷ್ಟು ಜಾಗಬಿಡಬೇಕು ಎನ್ನುವ ನಿಯಮ ಅಥವಾ ಸೌಲಭ್ಯವೆಂದುಕೊಳ್ಳಿ.
MS Word ತಂತ್ರಾಂಶದಲ್ಲಿ ಟೈಪ್ ಮಾಡಿ ಅನುಭವವಿರುವವರಿಗೆ ಇದು ಹೊಸತೇನಲ್ಲ. left alignment, right alignment, letter spacing ಇತ್ಯಾದಿಯಾಗಿ ವಿಧವಿಧವಾದ ಸೌಲಭ್ಯಗಳು ಸಾಮಾನ್ಯವಾಗಿ ಎಲ್ಲಾ ವರ್ಡ್ ಪ್ರೋಸೆಸಿಂಗ್ ತಂತ್ರಾಂಶಗಳಲ್ಲಿರುತ್ತವೆ.
ಆದರೆ firefoxನಲ್ಲಿ ಮಾತ್ರ, ಕನ್ನಡದ ಅಕ್ಷರಗಳ ಸ್ಪೇಸಿಂಗ್ ನಲ್ಲಿ ಲೋಪವಿದೆ. ಲೋಪವೇನೆಂದರೆ, ಅಕ್ಷರದಲ್ಲಿನ ಒತ್ತು, ದೀರ್ಘ, ತಲೆಕಟ್ಟು, ಕೊಂಬು, ಅರ್ಕಾವತ್ತು ಇವೆಲ್ಲವನ್ನೂ ಪ್ರತ್ಯೇಕ ಅಕ್ಷರಗಳೆಂದು firefox ಭಾವಿಸುತ್ತದೆ. ಹಾಗಾಗಿ, ಒಂದೊಂದನ್ನೂ ಬಿಡಿಬಿಡಿಯಾಗಿ diplay ಮಾಡಲು ಪ್ರಯತ್ನಿಸುತ್ತದೆ. ಕಾಗುಣಿತವಿಲ್ಲದ, ಬಿಡಿ ಅಕ್ಷರಗಳನ್ನು ಮಾತ್ರ ಉಪಯೋಗಿಸಿ ನೋಡಿ. ಆಗ ಈ ಸಮಸ್ಯೆ ಇರುವುದಿಲ್ಲ. ಉದಾಹರಣೆಗೆ, ಮನ, ಜನ, ಸದನ, ಮದನ, ರಚನ, ಪದ, ಅಗಲ, ಅಚಲ ಇತ್ಯಾದಿ ಪದಗಳು.
ಗುಣಿತಾಕ್ಷರಗಳಲ್ಲಿ ಆದರೆ, ಒಂದು ಅಕ್ಷರವು ಒಂದಕ್ಕಿಂತ ಹೆಚ್ಚಿನ glyphನಿಂದ ತಯಾರಾಗುತ್ತದೆ. glyph ಅಂದರೆ ಮೇಲೆ ಹೇಳಿದ ಕೊಂಬು, ದೀರ್ಘ ಇತ್ಯಾದಿ. Firefox ಲೆಟರ್-ಸ್ಪೇಸಿಂಗನಲ್ಲಿನ ದೋಷವೆಂದರೆ, ಒಂದೊಂದು glyph ಅನ್ನೂ ಒಂದೊಂದು ಅಕ್ಷರವೆಂದು ಅದು ಅಪಾರ್ಥ ಮಾಡಿಕೊಳ್ಳುವುದು.
ಬರಹ ಕನ್ನಡ ಫಾಂಟಿನಲ್ಲಿನ ಎಲ್ಲಾ glyph ಗಳ ಪಟ್ಟಿಗಾಗಿ ಇಲ್ಲಿ ನೋಡಬಹುದು: http://www.baraha.com/web_docs/glyph_codes_kan.htm


ಈಗ ಪರಿಹಾರದ ಕಡೆಗೆ ಗಮನ ಹರಿಸೋಣ.
ಲೆಟರ್ ಸ್ಪೇಸಿಂಗ್ ಬಗ್ಗೆ ನಿಮ್ಮ ಬ್ಲಾಗ್ ಟೆಂಪ್ಲೇಟಿನಲ್ಲಿರುವ ಸಾಲನ್ನು ತೆಗೆದು ಹಾಕಿ ಅಥವ ಕಾಮೆಂಟ್ ಮಾಡುವ ಮೂಲಕ ಅನೂರ್ಜಿತಗೊಳಿಸಿ.
ಬ್ಲಾಗಿನ ಹೆಸರಲ್ಲಿ display ಸಮಸ್ಯೆ ಇದ್ದರೆ,
h1 header style definition ನಲ್ಲಿ ಈ ಸಾಲು ಇರುತ್ತದೆ. ಅಷ್ಟನ್ನು ಮಾತ್ರ ತೆಗೆದು ಹಾಕಿ.
letter-spacing:-2px;

ಲೇಖನದ ಹೆಸರಲ್ಲಿ display ಸಮಸ್ಯೆ ಇದ್ದರೆ, ಇದು h2 style defintion ನಲ್ಲಿ ಇರುವ ಸಾಧ್ಯತೆಗಳಿರುತ್ತವೆ. ನಿಮ್ಮ ಟೆಂಪ್ಲೇಟ್ ಕೋಡ್ ನೋಡಿ, ಎಲ್ಲಿದೆ ಎಂದು ತಿಳಿಯಿರಿ.

ಉದಾಹರಣೆಗೆ: ನನ್ನ ಟೆಂಪ್ಲೇಟಿನಲ್ಲಿ ಮೊದಲು ಈ ಸಾಲು ಇತ್ತು.
h1{padding:25px 0px 10px 3%;border-top:double 3px #BF5C00;border-bottom:solid 1px #E89E47;color:#F5DEB3;letter-spacing:-2px;background:#FEA088;font:bold 300% Verdana,Sans-Serif;}

ಅದನ್ನು ಈಗ ಕೆಳಕಂಡ ರೀತಿಯಲ್ಲಿ ಬದಲಾಯಿಸಿದೆ ಅಷ್ಟೆ, letter-spacing ಕೋಡ್ ತೆಗೆಯುವ ಮೂಲಕ. ಸಮಸ್ಯೆ ಬಗೆಹರಿಯಿತು.
h1{padding:25px 0px 10px 3%;border-top:double 3px #BF5C00;border-bottom:solid 1px #E89E47;color:#F5DEB3;background:#FEA088;font:bold 300% Verdana,Sans-Serif;}

ಮುಗಿಸುವ ಮುನ್ನ:

ಈ ಸಮಸ್ಯೆಯು ನಿಮ್ಮ ಬ್ಲಾಗಿನಲ್ಲಿಯೇ ಇದ್ದಲ್ಲಿ, ಮೇಲೆ ತಿಳಿಸಿದ ಪರಿಹಾರವನ್ನು ಉಪಯೋಗಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮಗೆ ತಿಳಿದವರ ಬ್ಲಾಗುಗಳಲ್ಲಿ ಈ ಸಮಸ್ಯೆ ಕಂಡು ಬಂದಲ್ಲಿ ಅವರಿಗೂ ತಿಳಿಸಿ, ಸರಿಪಡಿಸಲು ನೆರವಾಗಿ.
ಈ ಸಮಸ್ಯೆಯ ಅರಿವನ್ನು ಮಾಡಿಕೊಟ್ಟು, ಇದರ ಬಗ್ಗೆ ಬ್ಲಾಗಿಸಬೇಕೆಂದು ಪ್ರೇರೇಪಿಸಿದ ಸಿಸ್ಯ ಅವರಿಗೆ ಧನ್ಯವಾದಗಳು! :)

~ ಮನ

Link
Comments:
ನಿಮ್ಮ ಅಮೂಲ್ಯ ಲೇಖನಕ್ಕೆ ಧನ್ಯವಾದಗಳು ..ನಾನೂ ಸಹ ಇದನ್ನ ಗಮನಿಸಿದ್ದೆ ಆದರೆ ಅದರ ಬಗ್ಗ ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ..
 
Here's the technical version of it, that also has a link to the exact bug:

http://kannada.sampada.net/node/2

It was documented long back.

Hey, how about a link to Sampada and Planet on the blog?
 
Here's the link again
 
ವಾಹ್ ವಾಹ್ ಒಳ್ಳೆಯ ಅನಾಲಿಸಿಸ್ ಮಾಡಿದ್ದೀರ. ನನಗೆ ಇಷ್ಟೆಲ್ಲಾ ಗೊತ್ತಿರ್ಲಿಲ್ಲ. ಪ್ಯಾರಾವನ್ನು ಜಸ್ಟಿಫೈ ಮಾಡಿದರೆ ಮಾತ್ರ ಹೀಗಾಗುತ್ತದೆ ಎಂಬುದು ಗೊತ್ತಿತ್ತು.
 
ನಮಸ್ಕಾರ,

ನಿಮ್ಮ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಸಾರ್ಥಕವಾಯಿತು.
ಆದರೆ, ನಾನು template ಅಲ್ಲಿ ನೀವು ಹೇಳಿದಂತೆ ಬದಲಾವಣೆ ಮಾಡಿದೆ. Windows 2000ಅಲ್ಲಿ ಇರುವವರಿಗೆ ಈ ಸಮಸ್ಯೆ ಇನ್ನೂ ಇದೆ. ಏನಾದ್ರೂ ಮಾಹಿತಿ ಇದೆಯಾ?
 
ಪ್ರತಿಕ್ರಿಯಿಸಿದವರೆಲ್ಲರಿಗೂ ಧನ್ಯವಾದಗಳು. :)

"you-know-who" ಅವರೆ,

Technical document on this bug ಇರುವುದರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. Firefox developers ಇದರ ಬಗ್ಗೆ ಆದಷ್ಟು ಬೇಗ ಕೆಲಸ ಮಾಡಿ, ಮುಂದಿನ firefox ರಿಲೀಸಿನಲ್ಲಿ ಈ ಸಮಸ್ಯೆ ಪರಿಹರಿಸಲೆಂದು ಆಶಿಸೋಣ.

ಸಂಪದ ಮತ್ತು ಪ್ಲಾನೆಟ್ ಸಂಪರ್ಕಗಳನ್ನು ಇದೀಗ ಹಾಕುವೆ.
 
ನಮಸ್ಕಾರ ಮನಸ್ವಿನಿ,

"Kannada in Firefox browser in Windows 2000 OS" - ಇನ್ನೂ ಒಂದು ಮರೀಚಿಕೆಯಾಗೇ ಉಳಿದಿದೆ.
ವಿಂಡೋಸ್ ೨೦೦೦ ನಲ್ಲಿ ಕನ್ನಡ - ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಬ್ಲಾಗ್ ಲೇಖನ ನೋಡಿ.
ಅದರಲ್ಲಿನ ಅಕ್ಷರಮಾಲ.ಕಾಂ ಲೇಖನದ ಪ್ರಕಾರ ಫೈರ್ ಫಾಕ್ಸ್ ನಲ್ಲಿ ಸರಿಯಾದ ಕನ್ನಡ display ಬರುವಂತೆ ಮಾಡಲು ಸಾಧ್ಯವಿದೆ.

Also, please refer to Unicode Kannada support page in Kannada Wikipedia. ವಿವಿಧ ಬ್ರೌಸರ್, ವಿವಿಧ OS ಗಳಲ್ಲಿ, ಕನ್ನಡದ display ಬಗ್ಗೆ ಇದರಲ್ಲಿ ಬಹಳಷ್ಟು ಮಾಹಿತಿಯಿದೆ.
 
ಮನವೇ,

ಅದ್ಭುತವಾದ ಮಾಹಿತಿ. ಬೆಂಕಿ ನರಿಯಿಂದ ಬಹಳ ಬಹಳ ತೊಂದರೆ ಅನುಭವಿಸಿದ್ದಿನಿ. ಬೆಸತ್ತು, ತುತ್, ಎಂದು ಬಿಟ್ಟಿದ್ದೆ. ಈಗ ಖುಶಿಯೋ ಖುಶಿ.

ಸಿಸ್ಯಣ್ಣ ನವರಿಗು ನನ್ನ ಧ.ವಾ.ಗಳು

ಭೂತ
 
ಮನ,

ನಿಮ್ಮ ಲೇಖನದ ದಯೆಯಿಂದ ಈಗ ನಮ್ಮ ಬ್ಲಾಗ್ ಹಣೆಬರಹಗಳು ತಲೆ ಎತ್ತಿ ಚೆನ್ನಾಗಿ ಇವೆ !
ಈ ಮಾಹಿತಿ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು !!
ಸಿಸ್ಯ ಅವರಿಗೂ ವಂದನೆಗಳು..
 
ಬಹಳ ದೊಡ್ಡ ಮಾತು ಶಿವ್. :)

ಧನ್ಯವಾದಗಳು.
 
Gowtham,

Nice to know that you had written about this "Kannada in Firefox" awareness.
It has been learnt that, this bug in firefox about letter-spacing etc, has been filed with Firefox bugzilla. Not sure when the developers will look into it.

Nevertheless, we should be able to deal with it using the work-around of "Dont use such styles". :)

Cheers,
ಮನ | Mana
 
"ಮನವೇ ಮಂದಿರ 'ಜ್ಞಾನ'ದೇಗುಲ"
ಸಿವಾ...ಈ ತೊಂದರೆಯನ್ನ ಇಷ್ಟು ಸಲೀಸಾಗಿ ಪರಿಹರಿಸಬಹುದು ಅಂತ ತಿಳಿಸಿಕೊಟ್ಟಿದ್ದಕ್ಕೆ dv'ಗಳು. ನನ್ನ ಬ್ಲಾಗಿನಲ್ಲೂ ಅಗತ್ಯವಾದ ಬದಲಾವಣೆಗಳನ್ನ ಮಾಡ್ತೀನಿ :)
 
Where did you find it? Interesting read » » »
 
This comment has been removed by the author.
 
This comment has been removed by the author.
 
this solved my problem.
 
Post a Comment



<< Home
This page is powered by Blogger. Isn't yours?