ಮನದ ಮಾತು

Friday, July 21, 2006

 

ಆಪರೇಷನ್ ಡೈಮಂಡ್ ರ್ಯಾಕೆಟ್ - ರಾಕೆಟ್ ಅಲ್ಲ

ಮುನ್ನುಡಿ:
ತಪ್ಪು ಮಾಡದವ್ರ್ ಯಾರವ್ರೇ? ತಪ್ಪೇ ಮಾಡದವ್ರ್ ಎಲ್ಲವ್ರೆ?
ಬಹಳ ವರ್ಷಗಳಿಂದ ಸತ್ಯವೆಂದು ನಂಬಿದ್ದ ವಿಷಯವೊಂದು ಇದ್ದಕ್ಕಿದ್ದ ಹಾಗೆ ಮಿಥ್ಯವಾಗುವ ಉದಾಹರಣೆಯೊಂದನ್ನು 'ಹಂಸಗೀತೆಯ ಸಂಗೀತದ ಹಿಂದೆ' ಲೇಖನದಲ್ಲಿ ಬರೆದದ್ದು ಸರಿಯಷ್ಟೆ. ಆ ವರ್ಗಕ್ಕೆ ಸೇರುವ ಮತ್ತೊಂದು ಅಂಶ ಇದೋ ಇಲ್ಲಿದೆ.






ಚಿತ್ರಗಳನ್ನು ಗಮನಿಸಿ. ಇದು ಖಂಡಿತಾ ರ್ಯಾಕೆಟ್ / Racket.
ಕೆಲವು ತಾಣಗಳಲ್ಲಿ ಹಾಕಿರುವಂತೆ ರಾಕೆಟ್ / Rocket ಅಲ್ಲ. ಈ ಚಿತ್ರಗಳನ್ನು ವಿಸಿಡಿ ಇಂದ ಪಡೆದದ್ದು. ಅಧಿಕೃತವಾಗಿ ಚಿತ್ರದ ಹೆಸರು ಏನು ಎಂಬುದಕ್ಕೆ ಇದನ್ನು ಉಪಯೋಗಿಸಬಹುದು.
ಈ ಪದವು ತಪ್ಪಾಗಿ ಹಲವಾರು ಕಡೆ ಪ್ರಯೋಗವಾಗಿದೆ, ಮಾತಾಡವಾಗಲೂ ಹಲವಾರು ಜನ(ಇಲ್ಲಿಯವರೆಗೂ ನಾನು ಕೂಡ :ನಾ) ತಪ್ಪಾಗಿ ಉಪಯೋಗಿಸುತ್ತಿದ್ದಾರೆ.

ಉದಾಹರಣೆಗೆ:
ಚಿತ್ರರಂಗ ಡಾಟ್ ಕಾಂ: http://www.chitraranga.com/moviebase/movieinfo.asp?movieid=588
Spicevienna ಪುಟ: http://www.spicevienna.org/showMovie.php?m=23408
Randomness blog: http://thehappypeople.blogspot.com/2005/12/operation-diamond-rocket.html
Kulki's Kannada Lyrics Page: http://www.cs.toronto.edu/~kulki/kannada/haadu.html

ಮತ್ತು ಮುಖ್ಯವಾಗಿ, ಈ ರೀಡಿಫ್ ಲೇಖನ: http://in.rediff.com/movies/2006/apr/17raj.htm

ಆಂಗ್ಲ ವಿಕಿಪೀಡಿಯದ ಡಾ.ರಾಜ್ ಪುಟದಲ್ಲಿಯೂ ಈ ತಪ್ಪು ['ಅಚಾತುರ್ಯ'ವೆನ್ನಲಾಗದು :)] ನುಸುಳಿತ್ತು.

ಅದೇ ರೀತಿ, ಕನ್ನಡ ವಿಕಿಪೀಡಿಯದಲ್ಲಿ ಇರುವ ಡಾ.ರಾಜ್ ಲೇಖನದಲ್ಲಿ, ಚಿ.ಉದಯಶಂಕರ್ ಲೇಖನಲ್ಲಿ, ಅಷ್ಟೇ ಅಲ್ಲದೇ ಸ್ವತಃ ಆಪರೇಷನ್ ಡೈಮಂಡ್ ರಾಕೆಟ್ ಅನ್ನುವ ಲೇಖನದಲ್ಲೇ ತಪ್ಪುಗಳಾಗಿಬಿಟ್ಟಿದ್ದವು. ಅವೆಲ್ಲವನ್ನೂ ಈಗಷ್ಟೆ ಸರಿಪಡಿಸಿದೆ.

ಇನ್ನೂ ಹಲವಾರು ಅಂತರ್ಜಾಲ ತಾಣಗಳು, ಬ್ಲಾಗ್ ಪುಟಗಳು, ಪುಸ್ತಕಗಳು ಇತ್ಯಾದಿಯಾಗಿ ಜನಮನದಲ್ಲಿ ಇದೊಂದು ತಪ್ಪು ಪದ ನುಸುಳಿಬಿಟ್ಟಿದೆ. ಹಾಗೆಂದು ಎಲ್ಲರೂ ತಪ್ಪಾಗೇ ಬಳಸುತ್ತಿದ್ದಾರೆ ಎಂದರ್ಥವಲ್ಲ. ಸರಿಯಾದ ಪದಪ್ರಯೋಗ ಮಾಡುತ್ತಿರುವವರೂ ಬಹಳಷ್ಟು ಜನರಿದ್ದಾರೆ. ಸರಿಯಾದ ಪ್ರಯೋಗದ ಬಗ್ಗೆ ಒಬ್ಬರಿಂದ ಒಬ್ಬರಿಗೆ ತಿಳಿಯಬೇಕಷ್ಟೆ. ಸ್ವತಃ ನಾನೇ ಚಿಕ್ಕಂದಿನಿಂದ ಇಲ್ಲಿಯವರೆಗೂ ಇದನ್ನು 'ರಾಕೆಟ್' ಎಂದೇ ಅಂದುಕೊಂಡಿದ್ದೆ. ಇದೀಗ ನಿಖರವಾದ ಮಾಹಿತಿಯೊಂದಗೆ, ಸತ್ಯವಾವುದು, ಮಿಥ್ಯವಾವುದು ಎಂದು ತಿಳಿಯಿತು. ಇದು ನಿಮಗೂ ಅನ್ವಯಿಸಿದರೆ, ಈ ಲೇಖನ ಸಾರ್ಥಕ, ಹಾಗೆಯೇ ನಿಮಗೆ ತಿಳಿದವರಿಗೂ ಸರಿಪಡಿಸಿಕೊಳ್ಳಲು ಹೇಳಿ.



ಮುಗಿಸುವ ಮುನ್ನ:
ಈ ಚಿತ್ರದ ಸರಿಯಾದ ಹೆಸರನ್ನು ಮೊದಲ ಬಾರಿಗೆ, ಕನ್ನಡ ಆಡಿಯೋ ಫೋರಮ್ಮಿನಲ್ಲಿ ನನಗೆ ತಿಳಿಸ್ಕೊಟ್ಟ ಭೂತಕ್ಕೆ ನನ್ನ ಧನ್ಯವಾದಗಳು. :)

- ಮನ
Link
Comments:
ವಹ್,

ಎಂತಹ, ಉಪಯುಕ್ತ ಮಾಹಿತಿ. ಮನವೇ ಹೇಳಿದ ಹಾಗೆ ಎಶ್ಟೊ ಜನರ ಈ ವಿಷಯ ಅರಿವಾಗದೆ ಉಳಿದಿದೆ. ಆದಶ್ಟು ಜನ್ರಿಗೆ ಇದನ್ನು ತಿಳಿಸುವ ಕಾರ್ಯ ನಡೆಯಲಿ.

ಮನಕ್ಕೆ ಭೂತದ ನಮನ :)
 
ಮನ ಅವರೇ,
ನಿಮ್ಮ ಲೇಖನ ಓದಿದ ಮೇಲೆಷ್ಟೆ ತಿಳಿದಿದದ್ದು ಅದು ರಾಕೆಟ್ ಅಲ್ಲ ಅಂತಾ !ಧನ್ಯವಾದಗಳು !ಹಂಗೆ ಒಂದು ನಮಸ್ಕಾರ ಭೂತಕ್ಕೂ!!
 
ಮಾಹಿತಿಗೆ ಧನ್ಯವಾದಗಳು.
ಆದರೆ ನೀವು racket ಎಂದು ಕನ್ನಡದಲ್ಲಿ ಬರದಿರುವೆಡೆಯೆಲ್ಲಾ, ನಿಮ್ಮದೇನು ತಪ್ಪಿಲ್ಲದಿದ್ದರೂ ತುಂಗಾ ಫಾಂಟ್ ದೋಷದಿಂದಾಗಿ ಯ ನಂತರ ಅರ್ಕಾವತ್ತು ಬಂದು xp ಯಲ್ಲಿ ತಪ್ಪು ತಪ್ಪಾಗಿ ಕಾಣಿಸುತ್ತಿದೆ! ನೋಡಿ http://www.baraha.com/web_docs/unicode_issues.htm Issue 2.
ತಪ್ಪು ಮಾಡದರೋ ಯಾರವ್ರೇ...

- ಪಿ. ಕಲ್ಯಾಣ್
 
ಪ್ರತಿಕ್ರಿಯಿಸಿದವರೆಲ್ಲರಿಗೂ ಧನ್ಯವಾದಗಳು.

ಶಿವ್: ಲೇಖನವನ್ನು ಸಾರ್ಥಕಗೊಳಿಸಿದಿರಿ. :)

ಪಿ.ಕಲ್ಯಾಣ್: ಹೌದು. ಸ್ಕ್ರೀನ್ ಶಾಟ್ ಹಾಕಿರುವ ಮುಖ್ಯ ಉದ್ದೇಶವೇ ryaakeT ಪದವನ್ನು ಕನ್ನಡದಲ್ಲಿ ತೋರಿಸುವುದು.

ಆದರೆ, "ಯ ನಂತರ ಅರ್ಕಾವತ್ತು ಬಂದು xp ಯಲ್ಲಿ ತಪ್ಪು ತಪ್ಪಾಗಿ ಕಾಣಿಸುತ್ತಿದೆ!" ಎಂಬುದನ್ನು ಹೇಗೆ ಒಪ್ಪುವುದು?

ಅರ್ಕಾವತ್ತು ಮೊದಲ ಅಕ್ಷರದಲ್ಲೇ ಬರುವುದು, ಕನ್ನಡ ಸಾಹಿತ್ಯದಲ್ಲಿ ರೂಢಿಯಲ್ಲಿಲ್ಲ. ಆದರೆ: ಸೂರ್ಯ, ಕಾರ್ಯ, ಪರ್ಯಾಯ, ಮೌರ್ಯ, ಪರ್ಯಟನೆ ಮುಂತಾದ ಪದಗಳ ಥರಹವೇ, ರ್ಯಾಂಕ್ (Rank), ರ್ಯಾಕೆಟ್ (Racket), ರ್ಯಾಪಿಡ್ (Rapid), ರ್ಯಾಶನಲ್ (Rational) ಇತ್ಯಾದಿ ಪದಗಳನ್ನು ಸ್ವೀಕರಿಸಬೇಕಾಗುತ್ತದೆ. ಜೊತೆಗೆ, ಇವೆಲ್ಲವೂ ಕನ್ನಡೇತರ ಪದಗಳು ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಅಂದ ಹಾಗೆ, ಅರ್ಕಾವತ್ತು ಮೊದಲ ಅಕ್ಷರದಲ್ಲೇ ಬರುವ ಕನ್ನಡ ಪದಗಳು ಯಾವುವಾದರೂ ಇದೆಯೆ? ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.
 
Post a Comment



<< Home
This page is powered by Blogger. Isn't yours?