ಮನದ ಮಾತು

Thursday, July 06, 2006

 

ಕನ್ನಡಪ್ರಭ ಲೇಖನಗಳ ಲಿಂಕ್ ಹಾಕುವಾಗ...

ಮುನ್ನುಡಿ:
ಮೊನ್ನೆಯಷ್ಟೆ ವಿಜಯಕರ್ನಾಟಕ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿನ 'ಅಚಾತುರ್ಯ'ದ ಬಗ್ಗೆ ಬರೆದದ್ದು ಸರಿಯಷ್ಟೆ. ಅದರ ಬೆನ್ನಲ್ಲೇ ಇನ್ನೊಂದು ಪತ್ರಿಕೆಯ ಅಂತರ್ಜಾಲ ಆವೃತ್ತಿಯ ಬಗ್ಗೆ ಬರೆಯಬೇಕಾಗಿ ಬಂದದ್ದು ಸೋಜಿಗ! ಆದರೆ ಈ ಬಾರಿ, ವಿಷಯ ನೆಮ್ಮದಿಗೆಡಿಸುವಂತದ್ದು ಅಲ್ಲ, ನೆಮ್ಮದಿ ತರುವಂತದ್ದು ಮತ್ತು ಬಹಳಷ್ಟು ಜನರಿಗೆ ಉಪಯುಕ್ತವಾಗುವಂತದ್ದು. ಈ ಲೇಖನದ ಕಾರಣಕರ್ತರು: ವಿಚಿತ್ರಾನ್ನದಾತ ಶ್ರೀವತ್ಸ ಜೋಶಿಯವರು. ಇಲ್ಲಿ ಹೇಳಹೊರಟಿರುವ ತಂತ್ರದ ಕಾಪಿರೈಟ್ ಕೂಡ ಅವರದೇ!


ಅಂತರ್ಜಾಲ ಒಂದು ಬಲುದೊಡ್ಡ ಸಂಸಾರ ಸಾಗರ. ಇಲ್ಲಿ ಬಹುತೇಕ ಎಲ್ಲ ತಾಣಗಳೂ ಇತರ ತಾಣಗಳಿಗೆ ನೆಂಟರು. ಆ ನೆಂಟಸ್ತಿಕೆಯ ಗಂಟು ಹಾಕುವುದು ಒಂದು 'ಹೈಪರ್ ಲಿಂಕ್' (ಅಥವಾ ಲಿಂಕ್, ಸಂಪರ್ಕ, ಕೊಂಡಿ ಇತ್ಯಾದಿ) ಎಂಬ ಮಧ್ಯವರ್ತಿ. ಒಂದು ತಾಣದಿಂದ ಇನ್ನೊಂದಕ್ಕೆ ಸುಲಭವಾಗಿ ನೆಗೆಯುವುದಕ್ಕೆ ಲಿಂಕುಗಳ ಪಾತ್ರ ಮಹತ್ತರವಾದುದು.
ಒಂದು ತಾಣದಲ್ಲಿನ ಲೇಖನವೊಂದರ ಲಿಂಕ್ ಅನ್ನು ನಾವು ಈಮೈಲ್ ಗಳಲ್ಲಿ, ನಮ್ಮದೇ ಆದ ತಾಣಗಳಲ್ಲಿ, ವಿಶ್ವಕೋಶದ ಪುಟಗಳಲ್ಲಿ, ಹೀಗೆ ಎಲ್ಲೆಡೆ ಉಪಯೋಗಿಸುತ್ತೇವೆ. ಆದರೆ ಹಾಗೆ ಉಪಯೋಗಿಸಿದ ಲಿಂಕು, ಕೆಲಸಮಯದ ನಂತರ ಕೆಲಸ ಮಾಡುತ್ತದೆಯೋ ಇಲ್ಲವೇ ಮುರಿದು ಬಿದ್ದಿದೆಯೋ ಎಂಬುದು ನಮ್ಮ ಗಮನಕ್ಕೆ ಬರುವುದು ಅಪರೂಪ, ನಾವು ಚೆಕ್ ಮಾಡುತ್ತಾ ಇರುವುದೂ ಕೂಡ ತ್ರಾಸದ ಕೆಲಸ. ಈ ರೀತಿ, ಕೆಲಸಕ್ಕೆ ಬಾರದ ಕೊಂಡಿಗಳನ್ನು(ಮುರಿದು ಬಿದ್ದ) ಸಾಮಾನ್ಯವಾಗಿ 'ಬ್ರೋಕನ್ ಲಿಂಕ್ಸ್' ಎನ್ನುವರು.

ಕನ್ನಡಪ್ರಭದ ಲೇಖನಗಳ ಕೊಂಡಿಗಳು, ಒಂದು ದಿನವಷ್ಟೇ(ಅಥವಾ ಸ್ವಲ್ಪ ಹೆಚ್ಚು) ಜೀವಂತವಾಗಿರುತ್ತದೆ. ನಂತರ ಅದನ್ನು ಉಪಯೋಗಿಸಿದರೆ, "Please select some other news or categories." ಎಂದು ಬರುತ್ತದೆ. ಅಂದರೆ, ಆ ಲಿಂಕು "ಬ್ರೋಕನ್ ಲಿಂಕ್" ಆಗಿದೆ ಎಂದರ್ಥ.

ಉದಾಹರಣೆಗೆ: ಬೇಡರಕಣ್ಣಪ್ಪ ಚಿತ್ರಕ್ಕೆ ರಾಜಕುಮಾರ್ ಆಯ್ಕೆ ವಿವರಗಳು - ಹೆಚ್.ಎಲ್.ಎನ್.ಸಿಂಹರವರ ಪುತ್ರ ಹೆಚ್.ಎಲ್.ಶೇಷಚಂದ್ರ ಲೇಖನ ಕನ್ನಡಪ್ರಭದಲ್ಲಿ, ಡಾ.ರಾಜ್ ಅಸ್ತಂಗತರಾದ ಮರುದಿನ ಪ್ರಕಟವಾಗಿತ್ತು. ಆ ಲೇಖನದ ಕೊಂಡಿ:

http://www.kannadaprabha.com/NewsItems.asp?ID=KP%2A20060412220146&Title=Dr%2E+Rajkumar+passed+away&lTitle=s%DB%2E+%C1%DBe%E9O%DA%DF%C8%DA%E1%DB%C1%E9+B%AC%84%C4%C7&Topic=0&Dist=0

ಈ ಲೇಖನವು ಕೆಲಸ ಮಾಡುತ್ತಿಲ್ಲ. ಇದನ್ನು ಡಾ.ರಾಜ್‍ಕುಮಾರ್ ವಿಕಿಪೀಡಿಯ ಲೇಖನದಲ್ಲಿ ಉಪಯೋಗಿಸಲಾಗಿತ್ತು. ಈ ಲೇಖನವು ಕೆಲಸ ಮಾಡುತ್ತಿಲ್ಲವಾದ್ದರಿಂದ ಇದರ ಲಿಂಕನ್ನು ತೆಗೆಯಬೇಕಾಗಿತ್ತು. ಆದರೆ ಈಗ ತೆಗೆಯುವ ಗೋಜಿಲ್ಲ! ಅದನ್ನು ಕೊಂಚ ಮಾರ್ಪಾಡು ಮಾಡಿದರೆ ಆಯಿತಷ್ಟೆ!
ಆ ಮಾರ್ಪಾಡುವಿಕೆಯ ಗುಟ್ಟನ್ನು ರಟ್ಟು ಮಾಡಿ ಪುಣ್ಯ ಕಟ್ಟಿಕೊಂಡವರು: ಶ್ರೀವತ್ಸ ಜೋಶಿ

ಮಾಡಬೇಕಾದ್ದು ಇಷ್ಟೇ:
೧. ಲಿಂಕಿನಲ್ಲಿ &Title= ಎಂದು ಇದೆಯಲ್ಲಾ ಅದು ಮತ್ತು ಅಲ್ಲಿಂದ ಮುಂದೆ ಇರುವುದನ್ನೆಲ್ಲಾ ಸಂಪೂರ್ಣವಾಗಿ ತೆಗೆದುಹಾಕಿ.
೨. NewsItems.asp ಅನ್ನುವುದನ್ನು News.asp ಎಂದು ಬದಲಾಯಿಸಿ.
ಬಹುಕಾಲ (ಬಹುಷ: ಚಿರಕಾಲ) ಜೀವಂತವಾಗಿ ಉಳಿಯುವ ಲಿಂಕ್ ಈಗ ನಿಮ್ಮ ಮುಂದೆ ಹಾಜರ್!

ಮೇಲಿನ ಎರಡು ಬದಲಾವಣೆ ಮಾಡಿದ ನಂತರ ದೊರಕಿದ ಕೊಂಡಿ: http://www.kannadaprabha.com/News.asp?ID=KP%2A20060412220146

ಈಗ ನೋಡಿ, ಈ ಸಜೀವ ಕೊಂಡಿ ಸರಿಯಾದ ಲೇಖನಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.
ಇನ್ನು ಮುಂದೆ ಕನ್ನಡಪ್ರಭದ ಯಾವುದೇ ಕೊಂಡಿಗಳನ್ನು ನಿಮ್ಮ ತಾಣದಲ್ಲಿ ಹಾಕುವಾಗ, ಅಥವ ಇತರರೊಡನೆ ಹಂಚಿಕೊಳ್ಳುವಾಗ ಅದಕ್ಕೆ ಮಾಡಬೇಕಾದ ಮೇಕಪ್ (ಮೇಲೆ ವಿವರಿಸಿದಂತೆ) ಮಾಡಿ, ನಂತರ ಹಾಕಿ/ಹಂಚಿಕೊಳ್ಳಿ.

ಮುಗಿಸುವ ಮುನ್ನ:
ಈ ಉಪಯುಕ್ತ 'ಮಾಹಿತಿ','ತಂತ್ರ','ಜ್ಞಾನ'ವನ್ನು ನಮ್ಮೊಡನೆ ಹಂಚಿಕೊಂಡ ಶ್ರೀವತ್ಸ ಜೋಶಿಯವರಿಗೆ ಬಹಳ ಧನ್ಯವಾದಗಳು!

~ ಮನ

Link
Comments:
ಮನ,

ಕನ್ನಡಪ್ರಭ ಕುಣಿಕೆಗಳ ಬಗ್ಗೆ ಒಂದಿಷ್ಟು ಪ್ರಭೆಯನ್ನು ಫೋಕಸಿಸಿ ನೀವು ಬ್ಲಾಗಿಸಿದ್ದು ಒಳ್ಳೆಯದೇ ಆಯ್ತು.

ತಂತಮ್ಮ ಬ್ಲಾಗುಗಳಲ್ಲಿ ಜಾಲತಾಣಗಳಲ್ಲಿ ವಿ-ಅಂಚೆಗಳಲ್ಲಿ ಮತ್ತು ಲೇಖನಗಳಲ್ಲಿ ಪೂರಕಮಾಹಿತಿಗೆ ಕನ್ನಡಪ್ರಭವನ್ನು ನೆಚ್ಚಿ'ಕೊಂಡಿ'ರುವವರಿಗೆ ಇದು ಉಪಯುಕ್ತವಾದ ವಿಚಾರವಾಗಿರುತ್ತದೆ.

ಧನ್ಯವಾದಗಳಿಗೆ ಪ್ರತಿಧನ್ಯವಾದಗಳು. ಗೊತ್ತಿರುವುದನ್ನು ಇತರರಿಗೂ ಹಂಚುವುದು ನನಗೆ ಖುಶಿಕೊಡುವ ವಿಚಾರಗಳಲ್ಲೊಂದು.
 
ಉಪಯುಕ್ತ ಮಾಹಿತಿಗೆ ಧನ್ಯವಾದಗಳು.
 
sooper info Mana...
bEjAn upayukta mAhitigaLu siktA ive nin hathra..as always..keep up the good work :)
 
sanks for the info manavE. 'pun'tarigoo sanks.
 
ಬಸವಣ್ಣನವರೇ,

ಮನದ ಮಾತಿಗೆ ಮೌನ ಬೀಲಿ !
ನಂದಗೋಕುಲ ಚಿತ್ರದ ಈ ಹಾಡು ಎಷ್ಟು ಅರ್ಥಪೂರ್ಣವಲ್ಲವೇ?
ವಿಜಯಭಾಸ್ಕರ್ ಸಂಗೀತದಲ್ಲಿ, ಪಿ.ಸುಶೀಲ ಎಷ್ಟು ಸುಶ್ರಾವ್ಯವಾಗಿ ಹಾಡಿದ್ದಾರೆ.
ಆದರೆ ಈ ಸಾಲನ್ನು ರಚಿಸಿದ ಕೀರ್ತಿ ಸಾಹಿತಿ ವಿಜಯನಾರಸಿಂಹ ಅವರಿಗೆ ಸಲ್ಲಬೇಕು.

ಇದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು :)
 
This is very interesting site... » »
 
Post a Comment



<< Home
This page is powered by Blogger. Isn't yours?